ರಾಜೀವ ನಗರದಲ್ಲಿ ಕಾಂಗ್ರೆಸ್ ಬ್ಯಾನರ್ ಹರಿದುಹಾಕಿದ ಕಿಡಿಗೇಡಿಗಳು: ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಕಾಂಗ್ರೆಸ್ ವತಿಯಿಂದ 80 ಬಡಗುಬೆಟ್ಟು ಗ್ರಾಮದ ರಾಜೀವನಗರದಲ್ಲಿ ಅಳವಡಿಸಿರುವ “ಕಾಪುವಿಗಾಗಿ ಕಾಂಗ್ರೆಸ್” ಕಾರ್ಯಕ್ರಮದ ಬ್ಯಾನರ್ ನ್ನು ಯಾರೋ‌ ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ಮಾ.10ರಂದು ಮಧ್ಯರಾತ್ರಿ ನಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಘೋಷಣೆ ಮಾಡಿರುವ ಗ್ಯಾರಂಟಿ ಯೋಜನೆಗಳಾದ ಗೃಹ ಲಕ್ಷ್ಮೀ, ಅನ್ನ ಭಾಗ್ಯ, ಉಚಿತ ವಿದ್ಯುತ್ ಯೋಜನೆಯ ಜೊತೆಗೆ ಕಾಪುವಿಗಾಗಿ ಕಾಂಗ್ರೆಸ್ ಎಂಬ ಕಾರ್ಯಕ್ರಮದ ಬ್ಯಾನರ್ ನ್ನು ರಾಜೀವನಗರದ ಬಸ್ ನಿಲ್ದಾಣ ಬಳಿ ಅಳವಡಿಸಲಾಗಿತ್ತು. ಈ ಬ್ಯಾನರ್ ಅನ್ನು ಯಾರೋ ದುಷ್ಕರ್ಮಿಗಳು ಹರಿದು ಹಾಕಿದ್ದಾರೆ. ಕಿಡಿಗೇಡಿಗಳು […]