ಮಂಗಳೂರು: ಎಂ.ಐ.ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕ್ಯಾನ್ಸರ್ ಸಹಾಯವಾಣಿ ಲೋಕಾರ್ಪಣೆ
ಮಂಗಳೂರು: ಕ್ಯಾನ್ಸರ್ ಬಗ್ಗೆ ಭಯಬೇಡ, ಅರಿವಿರಲಿ ಎಂಬ ಧ್ಯೇಯದೊಂದಿಗೆ ಕ್ಯಾನ್ಸರ್ ಸಹಾಯವಾಣಿಯನ್ನುಮಂಗಳೂರಿನಲ್ಲಿ ಎಂ.ಐ.ಒ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರದಂದು ಲೋಕಾರ್ಪಣೆಗೊಳಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ ರಿಷ್ಯಂತ್ ಮುಖ್ಯ ಅತಿಥಿಯಾಗಿ ಆಗಮಿಸಿ ಸಹಾಯವಾಣಿಗೆ ಅಧಿಕೃತ ಚಾಲನೆಯನ್ನು ನೀಡಿ ಮಾತನಾಡಿ ಕ್ಯಾನ್ಸರ್ ಬಗ್ಗೆ ಸಮಾಜದಲ್ಲಿ ಜನರಿಗಿರುವ ಭಯ, ತಪ್ಪು ತಿಳುವಳಿಕೆ, ಗೊಂದಲಗಳನ್ನು ಹೋಗಲಾಡಿಸಿ ಅರಿವು ಮೂಡಿಸಿ ಆರಂಭಿಕ ಹಂತದಲ್ಲಿಯೆ ಜನರು ಎಚ್ಚರ ಗೊಳ್ಳುವಂತೆ ಮಾಡುವುದು ಸಮಾಜದ ಜನರಿಗೆ ಸಹಾಯಹಸ್ತ ಚಾಚುವುದು ಇದರ ಪ್ರಮುಖ ಉದ್ದೇಶ. ಎಂ.ಐ. […]