ಸಚಿವ ವಿ. ಸುನಿಲ್ ಕುಮಾರ್ ಮುನಿಯಾಲು- ಕಬ್ಬಿನಾಲೆ ಪ್ರದೇಶಗಳಿಗೆ ಭೇಟಿ
ಹೆಬ್ರಿ: ಕಾರ್ಕಳ ಬಿಜೆಪಿ ಅಭ್ಯರ್ಥಿ ಸಚಿವ ವಿ. ಸುನಿಲ್ ಕುಮಾರ್ ಅವರು ಎ.22 ರಂದು ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮುನಿಯಾಲು ಮತ್ತು ಕಬ್ಬಿನಾಲೆ ಪ್ರದೇಶಗಳಲ್ಲಿ ಗೇರು ಕಾರ್ಖಾನೆಯ ಕಾರ್ಮಿಕರು ಹಾಗೂ ಮತದಾರರನ್ನು ಭೇಟಿಯಾದರು. ಮೇ.10ಕ್ಕೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಮೂಲ್ಯವಾದ ಮತವನ್ನು ತಮಗೆ ನೀಡಿ ಸ್ವರ್ಣ ಕಾರ್ಕಳದ ಮತ್ತಷ್ಟು ಅಭಿವೃದ್ಧಿಗಾಗಿ ಹರಸಿ ಆಶೀರ್ವದಿಸುವಂತೆ ಕೋರಿದರು.