ಸ್ಟಾರ್ಟ್ ಅಪ್ ಕಂಪನಿ ಸಂಸ್ಥಾಪಕಿಯ ಮಗು ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆ ಸಂಪೂರ್ಣ; ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ?
ಬೆಂಗಳೂರು: ಇಲ್ಲಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸ್ಟಾರ್ಟ್ ಅಪ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಚನಾ ಸೇಠ್ ಅವರ ನಾಲ್ಕು ವರ್ಷದ ಮಗ ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಕುಮಾರ್ ನಾಯ್ಕ್ ತಿಳಿಸಿದ್ದಾರೆ. ಮಗುವನ್ನು ಕತ್ತು ಹಿಸುಕಿ ಸಾಯಿಸಲಾಗಿದೆ. ಒಂದೋ ಬಟ್ಟೆ ಅಥವಾ ದಿಂಬು ಬಳಸಲಾಗಿದೆ. ಕತ್ತು ಹಿಸುಕಿದ ಕಾರಣ ಮಗು ಸಾವನ್ನಪ್ಪಿದೆ. ಕೈಗಳನ್ನು ಬಳಸಿ ಕತ್ತು ಹಿಸುಕಿದಂತೆ ಕಾಣುತ್ತಿಲ್ಲ. ದಿಂಬು ಅಥವಾ ಇನ್ನಾವುದೋ ವಸ್ತುಗಳನ್ನು ಬಳಸಿದಂತೆ ತೋರುತ್ತಿದೆ. ಮಗುವಿನಲ್ಲಿನ ರಿಗರ್ ಮೋರ್ಟಿಸ್ ಪರಿಹಾರವಾಗಿದೆ […]