ಮಿಲಾಗ್ರೆಸ್ ಟೋಸ್ಟ್‌ಮಾಸ್ಟರ್ಸ್‌ನ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಂಗಳೂರು: ಮಿಲಾಗ್ರೆಸ್ ಟೋಸ್ಟ್‌ಮಾಸ್ಟರ್ಸ್‌ನ ಹೊಸ ಪದಾಧಿಕಾರಿಗಳ 2023-24ರ ಪದಗ್ರಹಣ ಸಮಾರಂಭ ಅಧ್ಯಕ್ಷ ಟಿಎಂ ಫ್ರಾನ್ಸಿಸ್ ರೆಗೊ ನೇತೃತ್ವದಲ್ಲಿ ಭಾನುವಾರ ಜುಲೈ 2 ರಂದು ಮಿಲಾಗ್ರೆಸ್ ಚರ್ಚ್ ಕಾಂಪೌಂಡ್‌ನ ಮೋನಿಕಾ ಹಾಲ್‌ನಲ್ಲಿ ಮಾಡಲಾಯಿತು. ಸಮಾರಂಭವು “ಅನುಭವವನ್ನು ಅನ್ವೇಷಿಸಿ ಆನಂದಿಸಿ” ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಿಲಾಗ್ರಿಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಫಾ. ಮೈಕೆಲ್ ಸಂತಮೇಯರ್ ಆಗಮಿಸಿ ಮಾತನಾಡಿ, “ಅನುಭವವನ್ನು ಅನ್ವೇಷಿಸಿ ಆನಂದಿಸಿ” ವಿಷಯದ ಬಗ್ಗೆ ತಿಳುವಳಿಕೆ ನೀಡಿದರು. ಭಾಷೆಯ ಸ್ವೀಕಾರವು ನಮ್ಮನ್ನು ವಿಶ್ವ ಮಾನವನನ್ನಾಗಿ ಮಾಡುತ್ತದೆ. […]