ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ – ಮುಂಬೈ ಇಂಡಿಯನ್ಸ್ ಕದನ; ರಾಜಧಾನಿಯಲ್ಲಿ ತಪಾಸಣೆ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಆರ್‌ಸಿಬಿ – ಮುಂಬೈ ಇಂಡಿಯನ್ಸ್ (RCB vs MI) ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಸುಮಾರು 35 ಸಾವಿರ ಹಾಸನಗಳ ಸಾಮರ್ಥ್ಯವುಳ್ಳ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಸೇರಿವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಸ್ಟೇಡಿಯಂನಲ್ಲಿ ತಪಾಸಣೆಗೆ ಮುಂದಾಗಿದೆ. ಅಲ್ಲದೆ, ಬೆಂಗಳೂರು ನಗರದ ಬಹುತೇಕ ಕಡೆಗಳಲ್ಲಿ ತಪಾಸಣೆ ನಡೆಯುತ್ತಿದೆ.
ಕೋಹ್ಲಿ ಅಭಿಮಾನಿಯಿಂದ ರೋಹಿತ್ ಶರ್ಮಾ ಬೆಂಬಲಿಗನ ಹತ್ಯೆ: ಟ್ವಿಟರ್ ನಲ್ಲಿ ಅರೆಸ್ಟ್ ಕೊಹ್ಲಿ ಟ್ರೆಂಡ್
ಚೆನ್ನೈ: ಐಪಿಲ್ ಕ್ರಿಕೆಟ್ ನ ಹುಚ್ಚು ಅಭಿಮಾನವು ಯುವಕನೊಬ್ಬನ ಹತ್ಯೆಯಲ್ಲಿ ದುರಂತ ಅಂತ್ಯ ಕಂಡಿದೆ. ತಮಿಳುನಾಡಿನಲ್ಲಿ ರೋಹಿತ್ ಶರ್ಮಾ ಬೆಂಬಲಿಗನನ್ನು ವಿರಾಟ್ ಅಭಿಮಾನಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ. ಘಟನೆಯಲ್ಲಿ 24 ವರ್ಷದ ಪಿ ವಿಘ್ನೇಶ್ ಅನ್ನು ಎಸ್ ಧರ್ಮರಾಜ್ ಎನ್ನುವವನು ಕೊಲೆಮಾಡಿದ್ದಾನೆ. ಈ ಇಬ್ಬರೂ ಅರಿಯಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರು. ವಿಘೇಶ್ ಮುಂಬೈ ಇಂಡಿಯನ್ ಅಭಿಮಾನಿಯಾಗಿದ್ದರೆ, ಧರ್ಮರಾಜ್ ಆರ್.ಸಿ.ಬಿಯ ಕಟ್ಟರ್ ಅಭಿಮಾನಿ. ಈ ಇಬ್ಬರೂ ಕೂಡಾ ಮದ್ಯ ಸೇವಿಸಿದ್ದರು. ಆರಂಭಿಕ ತನಿಖೆಯ ಪ್ರಕಾರ, ಇಂಡಿಯನ್ ಪ್ರೀಮಿಯರ್ […]