ಮಂಗಳೂರು: ಮಾಜಿ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ ನಿಧನ

ಮಂಗಳೂರು: ಪ್ರಗತಿಪರ ಕೃಷಿಕ, ಮಾಜಿ ಮೇಯರ್ ದೇವಣ್ಣ ಶೆಟ್ಟಿ ಕುಳಾಯಿ (94 )  ಅಲ್ಪ ಕಾಲದ ಅಸೌಖ್ಯದಿಂದ ಭಾನಿವಾರ ಸಂಜೆ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಮೂವರು ಗಂಡು, ಓರ್ವ ಹೆಣ್ಣು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ದೇವಣ್ಣ ಶೆಟ್ಟಿ ಅವರು ಯಕ್ಷಗಾನ ಕಲಾವಿದರಾಗಿದ್ದು ಸುರತ್ಕಲ್ ಮಹಮ್ಮಾಯಿ ಮೇಳ ಸಹಿತ ಬೇರೆ ಬೇರೆ ಮೇಳಗಳಲ್ಲಿ ಕಲಾ ಸೇವೆ‌ ಮಾಡಿದ್ದಾರೆ. ತಾಲೂಕು ಬೋಡ್೯ ಅಧ್ಯಕ್ಷರಾಗಿ, ಜಿಲ್ಲಾ ಪರಿಷತ್ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸುರತ್ಕಲ್ ಪಟ್ಟಣ ಪ್ರದೇಶ ಗ್ರೇಟರ್ ಮಂಗಳೂರಿಗೆ […]