ಬೀದಿ ನಾಟಕದ ಮೂಲಕ ‘ಮೆಟಡೋರ್’ ಸಿನಿಮಾ ಟ್ರೇಲರ್ ಬಿಡುಗಡೆ

ಚಿಕ್ಕಮಗಳೂರು: ನಗರದ ಆಜಾದ್‌ಪಾರ್ಕ್ ನಲ್ಲಿ ವಿಭಿನ್ನವಾಗಿ ಬೀದಿ ನಾಟಕದ ಮೂಲಕ ಜಿಲ್ಲೆಯ ಸ್ಥಳೀಯ ನಿವಾಸಿಯೊಬ್ಬರು ನಿರ್ಮಾಣ ಮಾಡಿರುವ ‘ಮೆಟ ಡೋರ್’ ಸಿನಿಮಾದ ಟ್ರೇಲರ್ ಅನ್ನು ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಬುಧವಾರ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಸಖರಾಯಪಟ್ಟಣದ ನಿವಾಸಿಯಾದ ಕಿರಣ್ ಅವರು ನಾಯಕ ನಟನಾಗಿ ಹಾಗೂ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತು ಮೆಟಡೋರ್ ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಂದೇಶಗಳನ್ನು ಅಳವಡಿಸಲಾಗಿದ್ದು ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬರಲಿದೆ ಎಂದರು. […]