ದೀಪಾವಳಿ ಹಬ್ಬಕ್ಕೆ ಭಾರತ ಕ್ರಿಕೆಟ್ ತಂಡದ ಉಡುಗೊರೆ: ವಿರಾಟ್ ರೂಪ ತೋರಿದ ಕೊಹ್ಲಿ; ಸೋತ ಪಾಕ್
ಮೆಲ್ಬೋರ್ನ್: ಐಸಿಸಿ ಟಿ20 ವಿಶ್ವಕಪ್ 2022ರ ಸೂಪರ್ 12ರ ಪಂದ್ಯದಲ್ಲಿ ಭಾರತವು (160/6) ಪಾಕಿಸ್ತಾನವನ್ನು (159/8) 4 ವಿಕೆಟ್‌ಗಳಿಂದ ಸೋಲಿಸಿದೆ. ವಿರಾಟ್ ಕೊಹ್ಲಿ ತಮ್ಮ ಎಂದಿನ ಸ್ಪೋಟಕ ಲಯಕ್ಕೆ ಮರಳಿದ್ದು, ಅಜೇಯ 82 ರನ್ ಗಳಿಸಿದ್ದಾರೆ. ಪಂದ್ಯ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳ ಸುರಿಮಳೆಯೆ ಹರಿದು ಬರುತ್ತಿದೆ. ವಿರಾಟ್ ಕೊಹ್ಲಿ ಅವರು 54 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಭಾರತ ತಂಡಕ್ಕೆ ವಿಜಯಲಕ್ಷ್ಮಿ ಒಲಿಯುವಂತೆ ಮಾಡಿದ್ದಾರೆ. ಮೊದಲ ಏಳು ಓವರ್‌ಗಳಲ್ಲಿ ಅಗ್ರ ನಾಲ್ಕು ಆಟಗಾರರನ್ನು ಕಳೆದುಕೊಂಡರೂ […]