ಮೀರಾ ಡಹಾಣೂ ಬಂಟ್ಸ್ ವಾರ್ಷಿಕ ಟರ್ಫ್ ಫುಟ್ ಬಾಲ್ ಪಂದ್ಯಾವಳಿ
ಬೊಯಿಸರ್: ಸ್ಪರ್ಧೆಗಳು ನಮ್ಮಲ್ಲಿನ ಕ್ರೀಡಾಮನೋಭಾವವನ್ನು ಹುರಿದುಂಬಿಸುತ್ತವೆ. ಇಲ್ಲಿ ಸೋಲು ಗೆಲುವು ಮುಖ್ಯವಲ್ಲ. ಇಂತಹ ಕ್ರೀಡೆಗಳಲ್ಲಿ ಸ್ಪರ್ಧಿಸುವಲ್ಲಿನ ಹುಮ್ಮಸ್ಸು ನಮ್ಮಲ್ಲಿನ ಆತ್ಮಸ್ಥೈರ್ಯ ಹಾಗೂ ಮನೋಬಲವನ್ನು ಹೆಚ್ಚಿಸುತ್ತದೆ ಎಂದು ಮೀರಾ ಡಹಾಣೂ ಬಂಟ್ಸ್ ನ ಟ್ರಸ್ಟೀ ಹಾಗೂ ಮಾಜಿ ಅಧ್ಯಕ್ಷ ಕೆ. ಭುಜಂಗ ಶೆಟ್ಟಿ ಹೇಳಿದರು. ಮಹಾರಾಷ್ಟ್ರದ ಪಶ್ಚಿಮ ಕರಾವಳಿಯಲ್ಲಿನ ಪಾಲ್ಘರ್ ಜಿಲ್ಲಾ ಬೊಯಿಸರ್ ಪೂರ್ವದಲ್ಲಿನ ಸ್ಕೋರ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ರವಿವಾರ ಜರಗಿದ ಮೀರಾ ಡಹಾಣೂ ಬಂಟ್ಸ್ (ರಿ) ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್ ಉದ್ಘಾಟನೆಯ ಸಮಾರಂಭದಲ್ಲಿ […]