ದೋಣಿಯಿಂದ ಬಿದ್ದು ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ
ಮಂಗಳೂರು: ನಗರದ ಹಳೆ ಬಂದರು ಮೀನುಗಾರಿಕಾ ದಕ್ಕೆಯ ದಕ್ಷಿಣ ಭಾಗದಲ್ಲಿ ಶುಕ್ರವಾರ ಬೆಳಗ್ಗೆ ಮೀನುಗಾರಿಕಾ ದೋಣಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ತಮಿಳುನಾಡು ಮೂಲದ ಸೆಲ್ವಂ (41) ಅವರ ಮೃತದೇಹ ಶನಿವಾರ ಸಂಜೆ ಹೊಸ ದಕ್ಕೆಯ ಬಳಿ ಪತ್ತೆಯಾಗಿದೆ. ಸೆಲ್ವಂ ಅವರು ಶುಕ್ರವಾರ ದೋಣಿಯ ಫ್ಯಾನ್ ದುರಸ್ತಿ ಮಾಡಲು ನೀರಿಗೆ ಇಳಿದವರು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಪತ್ತೆಯಾಗಿದ್ದು, ಪಾಂಡೇಶ್ವರ ಪೊಲೀಸರು ಮುಂದಿನ ಕ್ರಮ ನಡೆಸುತ್ತಿದ್ದಾರೆ.