ಮೀನು ತಿನ್ನುವುದರಿಂದ ಕೊರೊನಾ ಬರೊದಿಲ್ಲ, ವದಂತಿಗೆ ಕಿವಿಗೊಡಬೇಡಿ: ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ
ಉಡುಪಿ: ಕೋವಿಡ್–19 (ಕೊರೊನಾ) ವೈರಸ್‌ನ ಪರಿಣಾಮ ಮೀನುಗಾರಿಕೆಯ ಮೇಲೆ ಅಷ್ಟಾಗಿ ಬೀರಿಲ್ಲ. ಆದರೆ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೀನಿನಲ್ಲಿ ಕೊರೊನಾ ವೈರಸ್ ಇದೆಯೆಂದು ಅಪಪ್ರಚಾರ ಮಾಡಲಾಗುತ್ತಿದೆ. ವದಂತಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಲ್ಪೆ ಮಿನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಒತ್ತಾಯಿಸಿದ್ದಾರೆ. ಮಲ್ಪೆ ಬಂದರಿನಲ್ಲಿ ಮಂಗಳವಾರ ಪತ್ರಿಕಾ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಮಲ್ಪೆ ಬಂದರಿನಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿದ್ದು, ಗ್ರಾಹಕರ ಸಂಖ್ಯೆಯಲ್ಲಿಯೂ ಯಾವುದೇ ಕೊರತೆ ಎದುರಾಗಿಲ್ಲ. ಬೇರೆ ಜಿಲ್ಲೆ […]