ಮೀನುಗಾರರ ಸಾಲ ಮನ್ನಾ: ಮಹಿಳಾ ಮೋರ್ಚಾ ಸ್ವಾಗತ

ಉಡುಪಿ: ರಾಜ್ಯದಲ್ಲಿ ಬಿ.ಯಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮೀನುಗಾರರ ಸಾಲ ಮನ್ನಾ ಮಾಡುವ ನಿರ್ಧಾರವನ್ನು ಪ್ರಕಟಿಸಿರುವುದನ್ನು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ ಗಣೇಶ್ ಸ್ವಾಗತಿಸಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರವಿದ್ದ ಸಂದರ್ಭಗಳಲ್ಲಿ ಕರಾವಳಿ ಮೀನುಗಾರರ ಹಿತವನ್ನು ರಕ್ಷಿಸುವ ಕಾರ್ಯ ಮಾಡುತ್ತ ಬಂದಿದ್ದು, ವಿಶೇಷವಾಗಿ ಮಹಿಳೆಯರಿಗೆ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿತ್ತು. ಸಬ್ಸಿಡಿ ದರದಲ್ಲಿ ಸಹಾಯ ಧನ ಯೋಜನೆ ಯನ್ನು ಈ ಹಿಂದೆ ಬಿಜೆಪಿ ಸರ್ಕಾರ ಆನುಷ್ಠಾನ ಮಾಡಿದ್ದು ಇದೀಗ ಕರಾವಳಿ […]