ದೂರದ ನಕ್ಷತ್ರಪುಂಜದಿಂದ ಸಂಕೇತವನ್ನು ಪತ್ತೆ ಮಾಡಿದ ಕೆನಡಾ ಮತ್ತು ಭಾರತೀಯ ಖಗೋಳಶಾಸ್ತ್ರಜ್ಞರು

ಪುಣೆ: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ) ಮತ್ತು ಕೆನಡಾದ ಮೆಕ್‌ಗಿಲ್ ವಿಶ್ವವಿದ್ಯಾಲಯ ಖಗೋಳಶಾಸ್ತ್ರ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿ ಬಹುದೂರದ ನಕ್ಷತ್ರಪುಂಜದ ಪರಮಾಣು ಹೈಡ್ರೋಜನ್‌ನಿಂದ ಹುಟ್ಟಿಕೊಂಡಿರುವ ರೇಡಿಯೋ ಸಂಕೇತವನ್ನು ಪತ್ತೆ ಮಾಡಿದ್ದಾರೆ. ಪುಣೆಯಲ್ಲಿನ ದೈತ್ಯ ಮೆಟ್ರೆವೇವ್ ರೇಡಿಯೊ ಟೆಲಿಸ್ಕೋಪ್ (GMRT) ಅನ್ನು ಉಪಯೋಗಿಸಿಕೊಂಡು ವಿಜ್ಞಾನಿಗಳು ಈ ಡೇಟಾವನ್ನು ಕಂಡುಹಿಡಿದಿದ್ದಾರೆ. ಈ ಸಂಕೇತವು ಇದುವರೆಗೆ ಕಂಡುಹಿಡಿದ “ಅತ್ಯಂತ ದೂರದಿಂದ ಬಂದಿರುವ ಅತಿ ದೊಡ್ಡ ಸಂಕೇತ”ವಾಗಿದೆ ಎಂದು ಐಐಎಸ್‌ಸಿ ತಿಳಿಸಿದೆ. ಸಂಶೋಧನೆಗಳನ್ನು ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿಯ ಮಾಸಿಕ ನೋಟಿಸ್ ನಲ್ಲಿ ಪ್ರಕಟಿಸಲಾಗಿದೆ. ಮೆಕ್‌ಗಿಲ್ […]