ಮಾ.17,18: ಜಿಲ್ಲೆಯಲ್ಲಿ ಗೋವಾ ರಾಜ್ಯಪಾಲರ ಪ್ರವಾಸ
ಉಡುಪಿ: ಗೌರವಾನ್ವಿತ ಗೋವಾ ರಾಜ್ಯಪಾಲರಾದ ಪಿ.ಎಸ್ ಶ್ರೀಧರನ್ ಪಿಳ್ಳೈ ಅವರು ಮಾರ್ಚ್ 17 ಮತ್ತು 18 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಮಾ.17 ರಂದು ರಾತ್ರಿ ಜಿಲ್ಲೆಗೆ ಆಗಮಿಸಿ, ವಾಸ್ತವ್ಯ ಮಾಡಲಿದ್ದಾರೆ. ಮಾ.18 ರಂದು ಬೆಳಗ್ಗೆ 7.35 ಕ್ಕೆ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ, ನಂತರ ಮಂಗಳೂರಿಗೆ ತೆರಳಲಿರುವರು.