ರಾಮತ್ವ ಜಾಗೃತಿಗೆ ರಾಮಲೀಲೋತ್ಸವ ವ್ಯಾಪಕವಾಗಿ ನಡೆಯಲಿ: ಪೇಜಾವರ ಶ್ರೀ ಕರೆ

ಉಡುಪಿ: ಕೃಷ್ಣಲೀಲೋತ್ಸವದ ಮಾದರಿಯಲ್ಲಿ ನಾಡಿನಾದ್ಯಂತ ರಾಮತ್ವದ ಜಾಗೃತಿ, ರಾಮಲೀಲೋತ್ಸವಗಳು ವ್ಯಾಪಕವಾಗಿ ನಡೆಯಬೇಕು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಎಂ. ಮೋಹನ ಆಳ್ವರ ನೇತೃತ್ವದಲ್ಲಿ ಮೂಡಬಿದಿರೆಯ ನೂತನ ಕನ್ನಡ ಭವನದಲ್ಲಿ ಮಂಗಳವಾರ ನಡೆದ ಸಮಾಲೋಚನಾ ಸಭೆಯಲ್ಲಿ ಶ್ರೀಗಳು ಮಾರ್ಗದರ್ಶನ ನೀಡಿದರು.‌ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಎಲ್ಲೆಡೆ ಅತ್ಯಂತ ಸಂಭ್ರಮದ ಕೃಷ್ಣ ಲೀಲೋತ್ಸವ ಮುದ್ದುಕೃಷ್ಣ ಸ್ಪರ್ಧೆ, ಕೃಷ್ಣ ಸಂದೇಶಗಳ ರಸಪ್ರಶ್ನೆ, ಪ್ರವಚನ ಸಪ್ತಾಹಗಳೇ ಮೊದಲಾಗಿ‌ ಕೃಷ್ಣ ಸಂದೇಶಗಳ ಜಾಗೃತಿಗಾಗಿ ಉತ್ಸವಗಳು […]