ಕರಾವಳಿ ಅಭಿವೃಧ್ದಿ ಪ್ರಾಧಿಕಾರದಿಂದ ಮೂಲ ಸೌಲಭ್ಯವನ್ನು ಕಲ್ಪಿಸುವ ಕಾರ್ಯ: ಮಟ್ಟಾರ್ ರತ್ನಾಕರ ಹೆಗ್ಡೆ
ಉಡುಪಿ, ಮೇ 29: ಗ್ರಾಮಾಂತರ ಜನರ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸರ್ಕಾರವು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮುಖಾಂತರ ಮೂಲ ಸೌಲಭ್ಯವನ್ನು ಕಲ್ಪಿಸುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆಯವರು ತಿಳಿಸಿದರು. ಅವರು ಇತ್ತೀಚೆಗೆ ಉಡುಪಿ ತಾಲೂಕಿನ ಕಾಪು ವಿಧಾನ ಸಭಾ ಕ್ಷೇತ್ರದ ಪೆರ್ಡೂರಿನ ಪಕ್ಕಾಲು ಎಂಬಲ್ಲಿ ನಿರ್ಮಿಸಲಾದ ಕಾಂಕ್ರೀಟ್ ರಸ್ತೆ ಮತ್ತು ಮುದರಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಿಸಲಾದ ಪಿಲಾರು ಜಾರಂತಾಯ ದೇವಸ್ಥಾನದಿಂದ ಕಲ್ಲಿಮಾರು ಸಂಪರ್ಕ ರಸ್ತೆ, ಪಿಲಾರು ಗ್ರಾಮದ ಜಾಲಮೇಲ್ ಜಂಗಮ […]