ರಿಷಬ್ ಶೆಟ್ಟಿ ಹೊಸ ಹೆಜ್ಜೆ “ಕೆರಾಡಿ ಸ್ಟುಡಿಯೋಸ್” ಸ್ಥಾಪನೆ: ಚಿತ್ರಗಳ ಮಾರ್ಕೆಂಟಿಗ್ ಗಾಗಿ ಹೊಸ ವೇದಿಕೆ

ಚಿತನಟ, ನಿರ್ದೇಶಕ ರಿಷಬ್ ಶೆಟ್ಟಿ ಹೊಸ ಹೆಜ್ಜೆ, ಹೊಸ ಕನಸೊಂದನ್ನು ನನಸಾಗಿಸಿದ್ದು, ಚಿತ್ರಗಳ ಮಾರ್ಕೆಟಿಂಗ್, ಪ್ರಚಾರ ಮತ್ತು ಇತರ ಸೇವೆಗಳಿಗಾಗಿ “ಕೆರಾಡಿ ಸ್ಟುಡಿಯೋಸ್” ಅನ್ನು ಸ್ಥಾಪಿಸಿದ್ದಾರೆ. ಚಿತ್ರದ ಗೆಲುವಿಗೆ ನಿರ್ಮಾಣದಷ್ಟೇ ಪ್ರಚಾರವೂ ಅತ್ಯಗತ್ಯವಾಗಿದ್ದು, ತಾವು ಹುಟ್ಟಿ ಬೆಳೆದ ಊರಾದ ಕುಂದಾಪುರದ ಸಣ್ಣ ಹಳ್ಳಿ ‘ಕೆರಾಡಿ’ಯ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಿದಾರೆ. ತಮ್ಮ ಹೊಸ ಪ್ರಯತ್ನಕ್ಕೆ ಚಿತ್ರರಸಿಕರ ಬೆಂಬಲವನ್ನು ಅವರು ಕೋರಿದ್ದಾರೆ.