ನೋಡ ನೋಡುತ್ತಿದ್ದಂತೆಯೇ ದೈತ್ಯ ಅಲೆಗಳಿಗೆ ಸಿಕ್ಕು ಮರವಂತೆಯಲ್ಲಿ ಸಮುದ್ರ ಪಾಲಾದ ವ್ಯಕ್ತಿ
ಕುಂದಾಪುರ: ದೈತ್ಯ ಅಲೆಗಳ ರಭಸಕ್ಕೆ ಸಿಕ್ಕು ಸಮುದ್ರ ಪಾಲಾದ ವ್ಯಕ್ತಿಯೋರ್ವರ ಮೃತ ದೇಹವನ್ನು ಸತತ ಕಾರ್ಯಾಚರಣೆ ಬಳಿಕ ಮೇಲಕ್ಕೆತ್ತಿದ ಘಟನೆ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀಮಹಾರಾಜಾ ವರಾಹ ಸ್ವಾಮಿ ದೇವಸ್ಥಾನ ಬಳಿ ಸಮುದ್ರದಲ್ಲಿ ನಡೆದಿದೆ. ಮೂಲತಃ ಮಾರಣಕಟ್ಟೆ ಸಮೀಪದ ಚಿತ್ತೂರು ಗ್ರಾಮಪಂಚಾಯತ್ ವ್ಯಾಪ್ತಿಯ ನಾಯ್ಕಂಬ್ಳಿಯ ನಿವಾಸಿ ಚೇತನ್ ಶೆಟ್ಟಿ (೪೫) ಮೃತ ವ್ಯಕ್ತಿ. ಘಟನೆ ವಿವರ: ವಿದೇಶದಲ್ಲಿ ಹಲವು ವರ್ಷಗಳಿಂದ ಉದ್ಯೋಗದಲ್ಲಿದ್ದ ಚೇತನ್ ಶೆಟ್ಟಿ ಕಳೆದ ತಿಂಗಳಷ್ಟೇ ರಜೆಯಲ್ಲಿ ಊರಿಗೆ ಆಗಮಿಸಿದ್ದರು. ಭಾನುವಾರದಂದು ಸಮುದ್ರ ವಿಹಾರಕ್ಕೆಂದು […]