ಕಾರ್ಕಳ: ಮಾಳದಲ್ಲಿ ಅಳಿವಿನಂಚಿನಲ್ಲಿರುವ ಮಲಬಾರ್ ಮರ ಕಪ್ಪೆ ಪತ್ತೆ

ಚಿತ್ರ: ಮನು ಬಿ.ನಕ್ಕತ್ತಾಯ ಉಡುಪಿ: ಅಳಿವಿನಂಚಿನಲ್ಲಿರುವ ‘ಮಲಬಾರ್ ಟ್ರೀ ಟೋಡ್’ (ಮಲಬಾರ್ ಮರ ಕಪ್ಪೆ) ಪ್ರಬೇಧವು ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮಣ್ಣ ಪಾಪು ಮನೆ ಪರಿಸರದಲ್ಲಿ ಪತ್ತೆಯಾಗಿದ್ದು, ಈ ಮೂಲಕ ಮಾಳ ಅರಣ್ಯ ಪ್ರದೇಶವು ಕಪ್ಪೆಗಳಿಗೆ ಸೂಕ್ತವಾದ ಆವಾಸ ಸ್ಥಾನ ಎಂಬುದಾಗಿ ತಿಳಿದುಬಂದಿದೆ. 2003-04ರ ವರೆಗೆ ಅತ್ಯಂತ ಅಪರೂಪ ಎನಿಸಿದ್ದ ‘ಮಲಬಾರ್ ಟ್ರೀ ಟೋಡ್’ ಕಪ್ಪೆ ಪ್ರಬೇಧವು ಗೋವಾ, ಕೇರಳ, ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟಗಳ ಎರಡು ಮೂರು ಕಡೆಗಳಲ್ಲಿ ಮಾತ್ರ ಕಂಡು ಬಂದಿತ್ತು. ಕಪ್ಪೆ […]