ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಝುಲೇಖ ಮಮ್ತಾಜ್ ಆಯ್ಕೆ
ಮಂಗಳೂರು: 2018ನೇ ಸಾಲಿನ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ, ಬ್ಯಾರಿ ಕಲೆ ಕ್ಷೇತ್ರದಲ್ಲಿ ಖಾಲೀದ್ ತಣ್ಣೀರುವಬಾವಿ, ಬ್ಯಾರಿ ಸಾಹಿತ್ಯ ಕ್ಷೇತ್ರದಲ್ಲಿ ಝುಲೇಖ ಮಮ್ತಾಝ್, ಬ್ಯಾರಿ ಜಾನಪದ ಕ್ಷೇತ್ರದಲ್ಲಿ ನೂರ್ ಮಹಮ್ಮದ್ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 50,000 ನಗದು ಹಾಗೂ ಪ್ರಶಸ್ತಿ ಪ್ರತ್ರ ಒಳಗೊಂಡಿದೆ. ಅಲ್ಲದೇ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪುರಸ್ಕಾರವನ್ನು ಜೀವರಕ್ಷಕ ವಿ.ಮುಹಮ್ಮದ್, ಮತ್ತು ಸಮಾಜ ಸೇವಕ ಬಿ.ಎಮ್ ಉಮ್ಮರಬ್ಬ ಹಾಜಿ ಯವರಿಗೆ ನೀಡಿ ಗೌರವಿಸಲಾಗುವುದೆಂದು ಅಧ್ಯಕ್ಷ ಕರಂಬಾರ್ ಮುಹಮ್ಮದ್ ಅವರು ಸುದ್ದಿಗೋಷ್ಠಿಯಲ್ಲಿ […]