ಮಂಗಳೂರು: ಜನವಸತಿ ಇಲ್ಲದ ಮನೆ ಮುಂದೆ ಮಾನವ ಅಸ್ಥಿಪಂಜರ ಪತ್ತೆ

ಮಂಗಳೂರು: ಜನವಸತಿ ಇಲ್ಲದೆ ಮುಚ್ಚಲಾಗಿದ್ದ ಮನೆಯ ಮುಂದುಗಡೆ ವ್ಯಕ್ತಿಯೊಬ್ಬರ ಅಸ್ಥಿಪಂಜರ ನ.25 ರಂದು ಪತ್ತೆಯಾಗಿದೆ. ನಗರದ ಮಣ್ಣಗುಡ್ಡದ ಹೋಟೆಲ್ ದುರ್ಗಾ ಮಹಲ್ ಎದುರಿನ ರಸ್ತೆಯಲ್ಲಿರುವ ಮನೆಯ ಮುಂದುಗಡೆ ಈ ಅಸ್ಥಿಪಂಜರ ಪತ್ತೆಯಾಗಿದೆ. ವಿಷಯ ತಿಳಿದ ತಕ್ಷಣ ಬರ್ಕೆ ಪೊಲೀಸರು ಘಟನಾ ಸ್ಥಳಕ್ಕೆ ಬಂದು ನಿರೀಕ್ಷಣೆ ನಡೆಸಿದ್ದಾರೆ. ಈ ಮನೆಯಲ್ಲಿ ಹಲವು ಕಾಲಗಳಿಂದ ಯಾರೂ ವಾಸಿಸುತ್ತಿಲ್ಲ ಎನ್ನಲಾಗಿದೆ. ಹೆಚ್ಚಿನ ತನಿಖೆಯಿಂದ ನೈಜ ಮಾಹಿತಿ ಹೊರಬರಲಿದೆ.