ಮಂಚಿಕೆರೆ: ರಂಗಕರ್ಮಿ ಜಯಕರ್ ಮಣಿಪಾಲ ಅವರ ‘ವಿಜಯಧಾರ’ ಕೃತಿ ಬಿಡುಗಡೆ
ಮಣಿಪಾಲ: ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಜಯಕರ್ ಮಣಿಪಾಲ ಅವರ ನೂತನ ವಿಜಯಧಾರ (ಕರ್ಣ ಪರ್ವ) ನಾಟಕ ಕೃತಿಯನ್ನು ಬಡಗುಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಶಾಂತಾರಾಮ್ ಶೆಟ್ಟಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ರಂಗಭೂಮಿ ಪೂರಕ. ಆ ನಿಟ್ಟಿನಲ್ಲಿ ಜಯಕರ್ ಅವರು ರಂಗಭೂಮಿಯ ಒಳ ತಿರುಳುಗಳನ್ನು, ಅದರ ವಿಭಿನ್ನತೆಯನ್ನು ಹಳ್ಳಿಯ ವಾತಾವರಣಗಳಿಗೆ ವಿಸ್ತರಿಸಿ ಅಲ್ಲಿನ ಪ್ರತಿಭೆಗಳಿಗೆ ರಂಗ ನಾಟಕಗಳನ್ನು ಪರಿಚಯಿಸುತ್ತಿದ್ದಾರೆ […]