ಮಣಿಪುರದಲ್ಲಿ ಕುಕಿ-ಮೈತೈ ಹಿಂಸಾಚಾರ: ಮುಖ್ಯಮಂತ್ರಿಯಿಂದ ಸರ್ವಪಕ್ಷ ಸಭೆ; ಹಿಂಸಾಚಾರಕ್ಕೆ ಕೇಂದ್ರದ ಹತೋಟಿ
ಇಂಫಾಲ: ರಾಜ್ಯದಲ್ಲಿ ಕುಕಿ-ಮೈತೈ ಹಿಂಸಾಚಾರದ ನಡುವೆ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಶನಿವಾರ ಸರ್ವಪಕ್ಷ ಸಭೆ ನಡೆಸಿದರು. ಕೆಲವು ಪ್ರದೇಶಗಳಲ್ಲಿ ಸಣ್ಣ, ವಿರಳ ಹಿಂಸಾಚಾರ ಭುಗಿಲೆದ್ದರೂ ಭದ್ರತಾ ಪಡೆಗಳು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಬಂದಿವೆ ಎಂದು ಮೂಲಗಳು ತಿಳಿಸಿವೆ. ಬಿರೇನ್ ಸಿಂಗ್ ಮತ್ತು ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಅವರು ಉದ್ವಿಗ್ನತೆಯನ್ನು ಶಮನಗೊಳಿಸಲು ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಒಪ್ಪಿಕೊಂಡಿದ್ದಾರೆ ಮತ್ತು ರಾಜ್ಯವನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಮಣಿಪುರದ […]