ಮಣಿಪುರದ ಮೋರೆಹ ಗಡಿ ಪಟ್ಟಣದಲ್ಲಿ ಉಗ್ರರ ಗುಂಡಿಗೆ ಎಸ್‌ಡಿಪಿಒ ಬಲಿ

ಇಂಫಾಲ (ಮಣಿಪುರ): ಶಂಕಿತ ಬುಡಕಟ್ಟು ಉಗ್ರಗಾಮಿಗಳ ಗುಂಡಿಗೆ ಉಪವಿಭಾಗದ ಪೊಲೀಸ್​ ಅಧಿಕಾರಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಣಿಪುರದ ತೆಂಗನೌಪಾಲ್​ ಜಿಲ್ಲೆಯ ಮೋರೆಹ ಎಂಬಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬುಲೆಟ್​ ತಗುಲಿದ್ದ ಎಸ್​ಡಿಪಿಒ ಚಿಂಗ್ತಮ್​ ಆನಂದ್ ಅವರನ್ನು ಮೋರೆಹದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಅಲ್ಲಿ ಅವರು ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ವಿಶೇಷವಾಗಿ ಮೊರೆಹದಲ್ಲಿ ನೆಲೆಗೊಂಡಿರುವ ಹಲವಾರು ನಾಗರಿಕ ಸಮಾಜ ಸಂಘಟನೆಗಳು ಗಡಿ ಪಟ್ಟಣದಿಂದ ರಾಜ್ಯ ಪಡೆಗಳನ್ನು ತೆಗೆದುಹಾಕಲು ಒತ್ತಾಯಿಸಿದ ವಾರದ ನಂತರ ಈ ಘಟನೆ ನಡೆದಿದೆ. ಮಣಿಪುರದ […]