ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ

ಮಣಿಪಾಲ: ಮಣಿಪಾಲ ಕೆಎಂಸಿ ಆಸ್ಪತ್ರೆಯ ಮಕ್ಕಳ ಮೂತ್ರಪಿಂಡ ವಿಭಾಗದ ಉದ್ಘಾಟನೆ ಮತ್ತು ಮೂತ್ರಪಿಂಡ ರೋಗಿಗಳಿಗೆ ಮೂತ್ರಪಿಂಡ ಕಾಯಿಲೆ ಬಗ್ಗೆ ಜಾಗೃತಿ ಶಿಕ್ಷಣ ಕಾರ್ಯಕ್ರಮ ಇಂದು ನಡೆಯಿತು. ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಡಾ. ಪುಷ್ಪಾ ಜಿ. ಕಿಣಿ ಮಕ್ಕಳ ಮೂತ್ರಪಿಂಡ ವಿಭಾಗವನ್ನು ಉದ್ಘಾಟಿಸಿ ಮಾತನಾಡಿ, ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಾಧ್ಯಾಪಕಿ ಮತ್ತು ಘಟಕ ಮುಖ್ಯಸ್ಥೆ ಡಾ. ಪುಷ್ಪಾ ಜಿ. ಕಿಣಿ ಮಾತನಾಡಿ, ಮೂತ್ರಪಿಂಡ ಕಾಯಿಲೆ ಇರುವವರು ಉತ್ತಮ ಜೀವನ ನಡೆಸಲು ಈ ಎಂಟು ಸೂತ್ರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. […]
ಗಾಂಜಾ ಮಾರಾಟ ಯತ್ನ ಓರ್ವ ಬಂಧನ

ಮಣಿಪಾಲ: ಮಣಿಪಾಲದ ವಿದ್ಯಾರತ್ನ ನಗರ ಅಪಾರ್ಟ್ಮೆಂಟ್ ಒಂದರ ಸಮೀಪದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತಿದ್ದ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ. ಸಾಸ್ತಾನ, ಗುಂಡ್ಮಿಯ ಹದ್ದಿನಬೆಟ್ಟು ನಿವಾಸಿ ಶ್ರೀನಾಥ್ (28). ಬಂಧಿತ ಆರೋಪಿ. ಬಂಧಿತನಿಂದ 50 ಸಾವಿರ ಮೌಲ್ಯದ ಎರಡು ಕೇಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಸೆನ್ ಅಪರಾಧ ಪೊಲೀಸರು ಕಾರ್ಯಚರಣೆ ನಡೆಸಿದ್ದು, ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣಿಪಾಲದಲ್ಲಿ ಬೀದಿನಾಯಿಗಳ ಮಾರಣಹೋಮ: ವಿಷವುಣಿಸಿ 10 ನಾಯಿಗಳ ಹತ್ಯೆ

ಉಡುಪಿ, ಜೂ.25: ಮಣಿಪಾಲ ಮಾಂಡವಿ ಎಮರಾಲ್ಡ್ ಮುಂಭಾಗ 10 ಬೀದಿ ನಾಯಿಗಳನ್ನು ಮೀನಿನ ಮೂಲಕ ವಿಷ ಹಾಕಿ ಹತ್ಯೆಗೈಯ್ಯಲಾಗಿದೆ. ಜೂ. 22ರಂದು ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿ ವಿಷಪೂರಿತ ಮೀನುಗಳನ್ನು ಬೀದಿ ನಾಯಿಗಳಿಗೆ ಹಾಕಿ ತಿನ್ನುವಂತೆ ಮಾಡಿದ್ದು, ಇದರಿಂದ 8 ನಾಯಿಗಳು ಮತ್ತು ಜೂ.24ರಂದು ಎರಡು ನಾಯಿಗಳು ಮೃತಪಟ್ಟಿವೆ ಎಂದು ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ನ ಬಬಿತಾ ರಾಜ್ ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಎಲ್ಲ ನಾಯಿಗಳ ಕಳೇಬರಹವನ್ನು ಉಡುಪಿ ನಗರಸಭೆ ಸಿಬಂದಿ ತೆಗೆದು […]
ಮಣಿಪಾಲ: ಮಂಚಿಕೆರೆಯಲ್ಲಿ ಮತ್ತೊಮ್ಮೆ ಭೂಮಿ ಬಿರುಕು; ಆತಂಕ

ಉಡುಪಿ: ಮಣಿಪಾಲದ ಮಂಚಿಕೆರೆ ಎಂಬಲ್ಲಿ 5 ವರ್ಷಗಳ ಹಿಂದೆ ಬಿರುಕುಗೊಂಡಿದ್ದ ಭೂಮಿ, ಸದ್ಯ ಮತ್ತೊಮ್ಮೆ ಬಿರುಕು ಕಾಣುತ್ತಿದ್ದು ಆ ಭಾಗದಲ್ಲಿ ಆತಂಕ ಮನೆ ಮಾಡಿದೆ. ಐದು ವರ್ಷಗಳ ಬಿರುಕುಗೊಂಡ ಬಳಿಕ ಆ ಭಾಗದಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ಅಂದು ಭೂಮಿಯ ಭೂಕಂಪನ ವೇಳೆ ಸಂಭವಿಸುವ ಬಿರುಕಿನಂತಿತ್ತು. 2014 ರಲ್ಲಿ ಬಿರುಕುಗೊಂಡ ವೇಳೆ ಆ ಭಾಗಕ್ಕೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ವರದಿ ತಯಾರಿಸಿ ಜಿ.ಪಂ.ಗೆ ನೀಡಿದ್ದು, ಮಲ್ಪೆಯಿಂದ ಉಪ್ಪೂರು, ಮಣಿಪಾಲ, ಪರ್ಕಳ ಪ್ರದೇಶಗಳಲ್ಲಿ […]
ಮಣಿಪಾಲ ಭೇಟಿ ಖುಷಿ ಕೊಟ್ಟಿದೆ: ರಾಹುಲ್ ದ್ರಾವಿಡ್

ಮಣಿಪಾಲ:ಮಣಿಪಾಲ ಭೇಟಿ ಅವಿಸ್ಮರಣೀಯ ಅನುಭವ ಕೊಟ್ಟಿದೆ.ಏಕೆಂದರೆ ಮಣಿಪಾಲ ಸಮೂಹವು ತನ್ನ ಸಂಶೋಧನಾ ಚಟುವಟಿಕೆಗಳಿಗೆ ಮತ್ತು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಪ್ರಗತಿಗೆ ಹೆಸರುವಾಸಿಯಾಗಿದೆ ಎಂದು ಖ್ಯಾತ ಕ್ರಿಕೆಟ್ ತಾರೆ ರಾಹುಲ್ ದ್ರಾವಿಡ್ ಹೇಳಿದ್ದಾರೆ. ಅವರು ಮಂಗಳವಾರ ಮಣಿಪಾಲ ಆಸ್ಪತ್ರೆಗಳ ಪ್ರಚಾರ ರಾಯಭಾರಿಯಾಗಿ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಭ್ರೂಣ ಶಿಶು ಔಷಧ ವಿಭಾಗ ಮತ್ತು ಹಿರಿಯ ನಾಗರೀಕರ ಚಿಕಿತ್ಸಾಲಯ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು. “ಭ್ರೂಣದ ಮೆಡಿಸಿನ್ ಮತ್ತು ಹಿರಿಯ ನಾಗರೀಕರ ಚಿಕಿತ್ಸಾಲಯವು ವೈದ್ಯಕೀಯ ವಿಜ್ಞಾನದಲ್ಲಿ ಒಂದು ಪ್ರಗತಿಯಾಗಿದ್ದು ಮತ್ತು ಇದು ಸಾರ್ವಜನಿಕರಿಗೆ ಬಹಳಷ್ಟು […]