ಕಸ್ತೂರ್ಬಾ ಆಸ್ಪತ್ರೆ ಹೊರರೋಗಿ ಚಿಕಿತ್ಸೆ ವಿಭಾಗಕ್ಕೆ ರಜೆ

ಮಣಿಪಾಲ: ಆಗಸ್ಟ್ 19, 20, 21 ಮತ್ತು 31 ರಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ, ಉಡುಪಿಯ ಡಾ. ಟಿ.ಎಂ.ಎ.ಪೈ ಆಸ್ಪತ್ರೆ, ಮತ್ತು ಕಾರ್ಕಳದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗಳ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದಾಗ್ಯೂ, ಅಪಘಾತ ಮತ್ತು ತುರ್ತುಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.
ತುಳುನಾಡಿನ ಸಂಸ್ಕೃತಿ ಅಧ್ಯಯನ ಆನ್‌ಲೈನ್ ಕೋರ್ಸ್ ಉದ್ಘಾಟನೆ: ಇಂದು ಸಂಜೆ ಮಾಹೆಯ ಅಂಗಣದಲ್ಲಿ ಹುಲಿವೇಷ ಕುಣಿತ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಸೆಂಟರ್ ಫಾರ್ ಇಂಟರ್‌ಕಲ್ಚರಲ್ ಸ್ಟಡೀಸ್ ಆ್ಯಂಡ್ ಡಯಲಾಗ್ ಘಟಕವು ‘ಡಿಸರ್ನಿಂಗ್ ಇಂಡಿಯ: ಲಿವಿಂಗ್ ಕಲ್ಚರ್ಸ್ ಆಫ್ ತುಳುನಾಡು’ ಎಂಬ ಶೀರ್ಷಿಕೆಯಲ್ಲಿ ಆನ್‌ಲೈನ್ ಕೋರ್ಸ್ ಅನ್ನು ಆರಂಭಿಸುತ್ತಿದ್ದು ಇದರ ಉದ್ಘಾಟನೆ ಆಗಸ್ಟ್ 18 ಗುರುವಾರ ಸಂಜೆ 4:30 ಗಂಟೆಗೆ ಮಣಿಪಾಲದ ಮಾಹೆ ಮುಖ್ಯ ಕಚೇರಿಯ ಅಂಗಣದಲ್ಲಿ ನಡೆಯಲಿದೆ. ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಬಳಗದ ಸಂಸ್ಥೆಗಳ ಅಧ್ಯಕ್ಷ ಡಾ. ರಂಜನ್ ಪೈ, ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಕುಲಪತಿ […]
ಮಣಿಪಾಲ: ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಮಹಿಳೆಯರಿಗಾಗಿ ವಿವಿಧ ಕೋರ್ಸ್ ಗಳ ಉಚಿತ ತರಬೇತಿಗಳು

ಮಣಿಪಾಲ: ಇಲ್ಲಿನ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ಸ್ಕಿಲ್ ಇಂಡಿಯಾ ತರಬೇತಿ ಕೇಂದ್ರದಲ್ಲಿ ಯುವತಿಯರು ಮತ್ತು ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್, ಮಹಿಳೆಯ ಉಡುಪುಗಳ ವಿನ್ಯಾಸ, ಎಂಬ್ರಾಯಡರಿ ಮತ್ತು ಟೈಲರಿಂಗ್ ಕೋರ್ಸ್ ಗಳ ತರಬೇತಿಗಳನ್ನು 3 ತಿಂಗಳುಗಳ ಕಾಲ ಸಂಪೂರ್ಣ ಉಚಿತವಾಗಿ ನೀಡಲಾಗುವುದು. ಆಸಕ್ತರು ಕೂಡಲೇ ಸಂಪರ್ಕಿಸಿ ವಿಳಾಸ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ, ರೂಮನ್ ಟೆಕ್ನಾಲಜೀಸ್ ಪ್ರೈ.ಲಿ, 3 ನೇ ಮಹಡಿ, ರಿಲಾಯನ್ಸ್ ಟ್ರೆಂಡ್ ನ ಮೇಲೆ, ಲಕ್ಷ್ಮೀಂದ್ರನಗರ, ಮಣಿಪಾಲ ದೂರವಾಣಿ 9535040711, ವಾಟ್ಸಾಪ್ 9591229792 ಸಮಯ […]
ಮಣಿಪಾಲ: ಮಾಹೆ ಸಂಸ್ಥೆಗಳ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆ

ಮಣಿಪಾಲ: ಮಾಹೆಯ ಉನ್ನತ ಶಿಕ್ಷಣ ಅಕಾಡೆಮಿ ವತಿಯಿಂದ ದೇಶಭಕ್ತಿ ತುಂಬಿದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಾಹೆಯ ಕುಲಪತಿ ಡಾ.ಎಚ್.ಎಸ್. ಬಲ್ಲಾಳ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ,1955 ರ ವಿಲ್ಲಿಸ್ ಜೀಪ್ ನಲ್ಲಿ ಒಟ್ಟು ಇಪ್ಪತ್ಮೂರು ತುಕಡಿಗಳು ಭಾಗವಹಿಸಿದ್ದ ಪರೇಡ್ ತಂಡಗಳ ಪರಿಶೀಲನೆ ನಡೆಸಿದರು. ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಮಾಹಿತಿ-ತಂತ್ರಜ್ಞಾನ, ಬ್ಯಾಂಕಿಂಗ್ ತಂತ್ರಜ್ಞಾನ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಭಾರತವು ಹೇಗೆ ಮುನ್ನಡೆಯುತ್ತದೆ ಎಂಬ […]
ಆಗಸ್ಟ್ 20 ರಿಂದ 22 ರ ವರೆಗೆ ಡಿ. ದೇವರಾಜ ಅರಸು ಅವರ 107 ನೇ ಜನ್ಮ ದಿನಾಚರಣೆ

ಉಡುಪಿ: ಸಾಮಾಜಿಕ ಸುಧಾರಣೆಯ ಹರಿಕಾರ ಡಿ. ದೇವರಾಜ ಅರಸು ಅವರ 107 ನೇ ಜನ್ಮ ದಿನಾಚರಣೆಯನ್ನು ಆಗಸ್ಟ್ 20 ರಿಂದ 22 ರ ವರೆಗೆ ಜಿಲ್ಲಾ ಮಟ್ಟದಲ್ಲಿ ವಿಜೃಂಭಣೆಯಿಂದ ಆಚರಿಸಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ರಜತಾದ್ರಿಯ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ, ಡಿ. ದೇವರಾಜ ಅರಸು ಅವರ 107 ನೇ ಜನ್ಮ ದಿನಾಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ […]