ಆಪದ್ಭಾಂದವರಂತಿರುವ ಆಟೋ ರಿಕ್ಷಾ ಚಾಲಕರಿಗೂ ಆರ್ಥಿಕ ರಕ್ಷಣೆಯ ಅಗತ್ಯವಿದೆ: ವಿನಯ್ ಕುಮಾರ್ ಸೊರಕೆ

ಮಣಿಪಾಲ: ಹಗಲು ರಾತ್ರಿ ಎನ್ನದೆ ದುಡಿಯುವ, ಯಾವುದೇ ಸಮಯದ ಆಪತ್ತಿನಲ್ಲಿಯೂ ಸಹಾಯಕ್ಕೆ ಬರುವ ಆಟೋ ರಿಕ್ಷಾ ಚಾಲಕರು ಆಪದ್ಭಾಂದವರಿದ್ದಂತೆ. ಹೊತ್ತಲ್ಲದ ಹೊತ್ತಿನಲ್ಲಿಯೂ ನಮ್ಮ ಸಹಾಯಕ್ಕಾಗುವ ಆಟೋ ರಿಕ್ಷಾ ಚಾಲಕರಿಗೂ ಆರ್ಥಿಕ ರಕ್ಷಣೆ ಬೇಕು. ಈ ನಿಟ್ಟಿನಲ್ಲಿ ಆಟೋ ರಿಕ್ಷಾ ನಿರ್ವಾಹಕರ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿಯು  ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು. ಅವರು ಭಾನುವಾರ ಮಣಿಪಾಲದ ಬಾಳಿಗಾ ಹೋಟೇಲ್ ಬಳಿ ಆಟೋ ನಿರ್ವಾಹಕರ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಸ್ವಂತ […]

ಮಣಿಪಾಲ: ಆಗಸ್ಟ್ 28 ರಂದು ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆ

ಮಣಿಪಾಲ: ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮಣಿಪಾಲ ಶಾಖೆಯ ಹವಾನಿಯಂತ್ರಿತ ಸ್ವಂತ ಕಟ್ಟಡದ ಉದ್ಘಾಟನಾ ಸಮಾರಂಭವು ಆಗಸ್ಟ್ 28 ಆದಿತ್ಯವಾರದಂದು ಬೆಳಿಗ್ಗೆ 10.30 ಗಂಟೆಗೆ ಮಣಿಪಾಲ ಅಲೆವೂರು ರಸ್ತೆಯ ಬಾಳಿಗಾ ಹೋಟೆಲ್ ಬಳಿ ನಡೆಯಲಿದ್ದು, ಶಾಸಕ ಕೆ. ರಘುಪತಿ ಭಟ್ ಉದ್ಘಾಟನೆ ನೆರವೇರಿಸಲಿದ್ದಾರೆ. ಆಟೋ ನಿರ್ವಾಹಕರ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆ ವಹಿಸಲಿದ್ದಾರೆ. ಭದ್ರತಾ ಕೊಠಡಿಯನ್ನು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪೇಂದ್ರ ನಾಯಕ್ […]

ಮಾಹೆ: ಆಗಸ್ಟ್ 26 ಮತ್ತು 27 ರಂದು ಮೆಂಟಲ್ ಹೆಲ್ತ್ ಹ್ಯಾಕಥಾನ್ -2022 ಆಯೋಜನೆ

ಮಣಿಪಾಲ: ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್, ಡೆಡಾಲಸ್ ಹೆಲ್ತ್‌ಕೇರ್ ಸಿಸ್ಟಮ್ಸ್ ಗ್ರೂಪ್‌ನ ಸಹಯೋಗದೊಂದಿಗೆ “ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ನಾವೀನ್ಯತೆ” ವಿಷಯದ ಕುರಿತು ಮೆಂಟಲ್ ಹೆಲ್ತ್ ಹ್ಯಾಕಥಾನ್ ಅನ್ನು ಆಗಸ್ಟ್ 26 ಮತ್ತು 27 ರಂದು ಆಯೋಜಿಸಲಿದೆ. ಭಾವನಾತ್ಮಕತೆ, ಮಾನಸಿಕ ಆರೋಗ್ಯ ಮತ್ತು ಸಾಮಾಜಿಕ ಯೋಗಕ್ಷೇಮ ಸೇರಿದಂತೆ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಹ್ಯಾಕಥಾನ್ ಅನ್ನು ಕೇಂದ್ರೀಕರಿಸಲಾಗಿದೆ. ಹ್ಯಾಕಥಾನ್ ಮಾನಸಿಕ ಆರೋಗ್ಯ ರಕ್ಷಣೆಯಲ್ಲಿ ನವೀನ ತಂತ್ರಜ್ಞಾನ ಆಧಾರಿತ ಪರಿಹಾರಗಳನ್ನು ಅಭಿವೃದ್ದಿ ಪಡಿಸಲು ಆಸಕ್ತಿ ಹೊಂದಿರುವ […]

ಮಣಿಪಾಲ: ಕಿಡ್ ಝೀ ಮಕ್ಕಳಿಂದ ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ರ‍್ಯಾಲಿ

ಮಣಿಪಾಲ: ‘ಹಸಿರು ಉಡುಪಿ ಸ್ವಚ್ಛ ಉಡುಪಿ’ ಉದ್ದೇಶದೊಂದಿಗೆ ಆಗಸ್ಟ್ 23 ಮಂಗಳವಾರದಂದು ಕಿಡ್ ಝೀ ಮಣಿಪಾಲ ಶಾಲೆಯ ಮಕ್ಕಳು ರ‍್ಯಾಲಿಯೊಂದನ್ನು ಏರ್ಪಡಿಸಿದ್ದರು. ಶಾಲಾ ಮಕ್ಕಳು ಸಿಂಡಿಕೇಟ್ ವೃತ್ತದಿಂದ ಮಣಿಪಾಲ ಪೋಲೀಸ್ ಸ್ಟೇಷನ್ ವರೆಗೆ ಮೆರವಣಿಗೆ ನಡೆಸಿದರು. ರ‍್ಯಾಲಿಯು ಭೂಮಿ ಉಳಿಸಿ ಮತ್ತು ಪ್ಲಾಸ್ಟಿಕ್ ಬ್ಯಾನ್ ಮಾಡಿ ಎನ್ನುವ ಘೋಷಣೆಯನ್ನೂ ಹೊಂದಿತ್ತು. ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸಂಚಾರಿ ವ್ಯವಸ್ಥೆಯನ್ನು ಸುಗಮಗೊಳಿಸಲು ಮಣಿಪಾಲ ಎಸ್.ಎಚ್.ಒ ಮಂಜುನಾಥ್, ಪಿ.ಎಸ್.ಐ ಮತ್ತು ಸಿಬ್ಬಂದಿಗಳು ಸಹಕರಿಸಿದರು. ಶಾಲಾ ಮಕ್ಕಳಿಗೂ ಪೊಲೀಸ್ ಇಲಾಖೆಯ ಕಾರ್ಯಗಳನ್ನು […]

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನಲ್ಲಿ ಓರಿಯಂಟೇಶನ್ ಡೇ ಕಾರ್ಯಕ್ರಮ

ಮಣಿಪಾಲ: ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಗೀತ ಅಕಾಡೆಮಿಯನ್ನು ಪ್ರಾರಂಭಿಸುವ ಹಂತದಲ್ಲಿದೆ ಎಂದು ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಹೇಳಿದರು. ಅವರು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ತನ್ನ ಹೊಸ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಓರಿಯಂಟೇಶನ್ ಡೇ-2022 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಕಲಾ ಅಧ್ಯಯನ ವಿಶ್ವವಿದ್ಯಾಲಯದ ಅಂತಸತ್ವವಾಗಿದ್ದು, ಅದಿಲ್ಲದೆ ಶೈಕ್ಷಣಿಕ ಜೀವನವು ತುಂಬಾ ಯಾಂತ್ರಿಕವಾಗುತ್ತದೆ ಎಂದರು. ಮಣಿಪಾಲ ಸಂಸ್ಥೆಗಳ ಪ್ರಾರಂಭದ ಹಂತದಲ್ಲಿ ಅಂತರ ಶಿಕ್ಷಣ ಶಾಖೀಯತೆ ಉದಯವಾಗಿತ್ತು […]