ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಮಣ್ಣಪಳ್ಳದಲ್ಲಿ ಕ್ರಾಫ್ಟ್ ವಿಲೇಜ್ ಮಾಡುವ ಚಿಂತನೆ: ಜಿಲ್ಲಾಧಿಕಾರಿ

ಉಡುಪಿ: ಮಣಿಪಾಲದ ಮಣ್ಣಪಳ್ಳವನ್ನು ಪ್ರವಾಸೀ ತಾಣವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಲ್ಲಿ ಕ್ರಾಫ್ಟ್ ವಿಲೇಜ್ ಮಾಡುವ ಬಗ್ಗೆ ಚಿಂತನೆ ಮತ್ತು ಅಗತ್ಯ ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಣ್ಣಪಳ್ಳದಲ್ಲಿ ವಾರದ ಮಾರುಕಟ್ಟೆ, ಆಹಾರ ಮೇಳ ಮತ್ತು ಕರಕುಶಲ ವಸ್ತುಪ್ರದರ್ಶನ ಮುಂತಾದ ಕಾರ್ಯಕ್ರಮಗಳ ಮೂಲಕ ದೆಹಲಿ ಹಾಟ್ ಮಾದರಿಯಲ್ಲಿ ಕ್ರಾಫ್ಟ್ ವಿಲೇಜ್ ಮಾಡಲು […]
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಶಿಕ್ಷಕರಿಗೆ ಪ್ರಶಸ್ತಿ ಪದಾನ ಸಮಾರಂಭ

ಉಡುಪಿ: ಸೆ.4 ರಂದು ಮಧ್ಯಾಹ್ನ 2.30 ಕ್ಕೆ ರಜತಾದ್ರಿಯ ವಾಜಪೇಯಿ ಸಂಭಾಂಗಣದಲ್ಲಿ 2022-23 ನೇ ಸಾಲಿನ ಶಿಕ್ಷಕರ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಶಿಕ್ಷಕ ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಒಟ್ಟು 17 ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಲಯವಾರು ಪ್ರಶಸ್ತಿ ವಿಜೇತರು: ಕಿರಿಯ ಪ್ರಾಥಮಿಕ ವಿಭಾಗ ಶ್ರೀ ರಾಮ ಶೆಟ್ಟಿ, ಮು.ಶಿ ವಿದ್ಯಾಮಂದಿರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿ ಬ್ರಹ್ಮಾವರ ಶೀಮತಿ ಸುಜಾತಾ ಕೆ, ಸ.ಶಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಳಸುಂಕ, […]
ಮಾಹೆ: ವಿದ್ಯಾರ್ಥಿಗಳಿಗಾಗಿ ಜೆಂಡರ್ ಚಾಂಪಿಯನ್ ಕಾರ್ಯಾಗಾರ

ಮಣಿಪಾಲ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ಮಾಹೆಯ ವಿದ್ಯಾರ್ಥಿ ವ್ಯವಹಾರಗಳ ವಿಭಾಗವು ವಿವಿಧ ವಿದ್ಯಾರ್ಥಿ ಸಮುದಾಯಕ್ಕೆ ಜೆಂಡರ್ ಚಾಂಪಿಯನ್ ಕಾರ್ಯಾಗಾರವನ್ನು ಆಗಸ್ಟ್ 27 ರಂದು ಬೆಳಿಗ್ಗೆ 9.30 ರಿಂದ ಸಂಜೆ 4.30 ರವರೆಗೆ ಆಯೋಜಿಸಲಾಗಿತ್ತು. ಮಾಹೆಯ ವಿವಿಧ ಸಂಸ್ಥೆಗಳಿಂದ 55 ಅಧ್ಯಾಪಕ ಸಂಯೋಜಕರು ಮತ್ತು ಆಯ್ದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಗೌರವ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶಾಂತವೀರ ಶಿವಪ್ಪ ಮಾತನಾಡಿ, ಎಲ್ಲಾ ಲಿಂಗಗಳಿಗೂ […]
ಗಣೇಶ ಚತುರ್ಥಿ ಆಚರಣೆ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೂರ್ವಾಭಾವಿ ಸಭೆ

ಉಡುಪಿ: ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೌರಿ ಗಣೇಶ ಚತುರ್ಥಿ ಸಂದರ್ಭದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಕೂರ್ಮಾ ರಾವ್ ನೇತೃತ್ವದಲ್ಲಿ ಸಭೆ ನಡೆಯಿತು. ಜಿಲ್ಲೆಯಲ್ಲಿ ಆಗಸ್ಟ್ 31 ರಿಂದ ಆರಂಭವಾಗುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ, ವಿಸರ್ಜನೆ ಕಾರ್ಯಕ್ರಮಗಳಿಗೆ ಅಗತ್ಯ ಅನುಮತಿಗಳನ್ನು ನೀಡುವಾಗ ಕಂದಾಯ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಗಳ ನಡುವೆ ಯಾವುದೇ ಗೊಂದಲಗಳಿಗೆ ಆಸ್ಪದ ನೀಡದೆ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ […]
ಮಣಿಪಾಲ: ಲಕ್ಷ್ಮೀಂದ್ರ ನಗರದಲ್ಲಿ ಈಸಿ ಬೈ ನೂತನ ಮಳಿಗೆ ಉದ್ಘಾಟನೆ

ಮಣಿಪಾಲ: ಇಲ್ಲಿನ ಲಕ್ಷ್ಮೀಂದ್ರ ನಗರದಲ್ಲಿ ದುಬೈನ ಲ್ಯಾಂಡ್‍ಮಾರ್ಕ್ ಗ್ರೂಪ್ ನ ಬಟ್ಟೆ ಮಳಿಗೆ ಈಸಿ ಬೈ ನ ನೂತನ ಶಾಖೆ ಶುಭಾರಂಭಗೊಂಡಿದೆ. ಕರ್ನಾಟಕದಲ್ಲಿ ಇದು ಈಸಿ ಬೈ ನ 25ನೇ ಮಳಿಗೆ ಮತ್ತು ದೇಶದಲ್ಲಿ 125 ನೇ ಮಳಿಗೆಯಾಗಿದೆ. ಈ ವಿಶಾಲವಾದ ಮಳಿಗೆಯು 8000 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಇಡೀ ಕುಟುಂಬ ಬಯಸುವ ಅತ್ಯಾಧುನಿಕ ವಸ್ತ್ರಗಳನ್ನು ಒದಗಿಸುತ್ತದೆ. ಇಲ್ಲಿ ಪುರುಷರ, ಮಹಿಳೆಯರ ಮತ್ತು ಮಕ್ಕಳ ಉಡುಪುಗಳ ಪ್ರತ್ಯೇಕ ವಿಭಾಗಗಳನ್ನು ಹೊಂದಿದ್ದು, ಪ್ರತಿಯೊಬ್ಬರಿಗೂ ಬೇಕಾದ ಅಗತ್ಯ ವಸ್ತುಗಳು ಒಂದೇ […]