ಸುತ್ತಲಿನ ಜಗತ್ತಿನ ಮಹಿಳೆಯರ ಬವಣೆಗಳೆ ಕಥೆಯ ಪಾತ್ರಗಳ ಹಿಂದಿನ ಸ್ಪೂರ್ತಿ: ವೈದೇಹಿ ಜಗತ್ತಿನಲ್ಲಿ ಕಥೆಗಾರ್ತಿಯ ಅಭಿಮತ

ಮಣಿಪಾಲ: ತಮ್ಮ ಮೇಲೆ ನಡೆಯುವ ದುರಾಡಳಿತದ ಬಗ್ಗೆ ಮಹಿಳೆಯರು ಮೌನವಿದ್ದರೂ ಒಂದು ಹಂತದ ನಂತರ ಸ್ಫೋಟಗೊಳ್ಳುತ್ತಾರೆ. ನನ್ನ ಸುತ್ತಲಿನ ಮಹಿಳೆಯರ ಜಗತ್ತು ಅವರ ವಿಧವಿಧದ ಬಳಲುವಿಕೆ ಪ್ರತಿಕ್ರಿಯಿಸಲು ಸಾಹಿತ್ಯವು ನನಗೆ ಅವಕಾಶ ನೀಡಿದೆ ಎಂದು ಖ್ಯಾತ ಲೇಖಕಿ ವೈದೇಹಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ವೈದೇಹಿ ಜಗತ್ತು-ಎರಡು ದಿನಗಳ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ವೈದೇಹಿ, ಅಕ್ಕು, ಅಮ್ಮಚ್ಚಿ, ಪುಟ್ಟಮ್ಮತ್ತೆ ಮುಂತಾದ ಪಾತ್ರಗಳು ತಾವು ಕಂಡ ಮನುಜ ಜಗತ್ತಿನ […]

ಮಣಿಪಾಲ: ಮಾಹೆಯ ಗಾಂಧಿಯನ್ ಸೆಂಟರಿನಲ್ಲಿ ವರ್ಲ್ಡ್ ಆಫ್ ವೈದೇಹಿ ವಿಚಾರ ಸಂಕಿರಣ ಉದ್ಘಾಟನೆ

ಮಣಿಪಾಲ: ಅಡುಗೆ ಮನೆಯಲ್ಲಿ ಮಹಿಳಾ ಲೋಕ, ಹಿತ್ತಲಿನಲ್ಲಿ ಹರಟೆ ಮತ್ತು ಅಂಗಳದಲ್ಲಿ ಜೀವನ ಎಂಬ ಮೂರು ಸ್ತರಗಳ ಬದುಕಿನ ‘ಧ್ವನಿ ರೂಪ’ವನ್ನು ವೈದೇಹಿ ನಮ್ಮ ಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ಓದಲು ಮತ್ತು ಬರೆಯಲು ಬಾರದವರ ಜಗತ್ತನ್ನು ವೈದೇಹಿ ಸೆರೆಹಿಡಿದಿರುವುದೇ ಅವರ ವಿಶೇಷತೆ ಎಂದು ಬಹುಶ್ರುತ ವಿದ್ವಾಂಸ ಪ್ರೊ.ಕೆ.ಪಿ.ರಾವ್ ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ “ವರ್ಲ್ಡ್ ಆಫ್ ವೈದೇಹಿ” ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಪುರುಷ ಪ್ರಧಾನ […]

ಮಣಿಪಾಲ: ತಪೋವನ ವತಿಯಿಂದ ಕಥಾಕಮ್ಮಟ ಕಾರ್ಯಾಗಾರ

ಮಣಿಪಾಲ: ನವೆಂಬರ್ 27 ರಂದು ತಪೋವನ ಮತ್ತು ಚಂದ ಪ್ರಕಾಶನ ಬೆಂಗಳೂರು ಇವರ ಸಹಯೋಗದಲ್ಲಿ ಹೊಸ ಕಥೆಗಾರರಿಗಾಗಿ ಖ್ಯಾತ ಸಾಹಿತಿ ವಸುಧೇಂದ್ರ ಅವರಿಂದ ಕಥಾ ಕಮ್ಮಟ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಾಗಾರದ ಶುಲ್ಕ 1000ರೂ. ಊಟೋಪಚಾರದ ವ್ಯವಸ್ಥೆ ಇದೆ. ಹೆಚ್ಚಿನ ವಿವರಗಳಿಗಾಗಿ 8762563517 ಅನ್ನು ಸಂಪರ್ಕಿಸುವಂತೆ ರೇವತಿ ನಾಡಿಗೇರ್ ತಿಳಿಸಿದ್ದಾರೆ.

ಮಣಿಪಾಲ: ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ 75ನೇ ವರ್ಷದ ಭಜನಾ ಕಾರ್ಯಕ್ರಮ

ಮಣಿಪಾಲ: ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ 75ನೇ ವರ್ಷದ ಭಜನಾ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಭಜನಾ ಮಂದಿರ ಮುಂಡ್ಕಿನಜೆಡ್ಡು, ಚೇರ್ಕಾಡಿ ಇದರ ಅಧ್ಯಕ್ಷ ರಾಜೇಶ್ ಪಾಟೀಲ್ ಇವರನ್ನು ಗೌರವಿಸಲಾಯಿತು.  

ಮಣಿಪಾಲ: ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ 7ನೇ ಎಟಿಎಂ ಶಾಖೆ ಉದ್ಘಾಟನೆ

ಮಣಿಪಾಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಮಣಿಪಾಲ ಬ್ಯಾಂಕಿನ ನೂತನ ಎಟಿಎಂ ಶಾಖೆ ಭಾನುವಾರದಂದು ಮಣಿಪಾಲದ ಕಮರ್ಷಿಯಲ್ ಕಾಂಪ್ಲೆಕ್ಸ್ ನ ನೆಲ ಅಂತಸ್ತಿನಲ್ಲಿ ಉದ್ಘಾಟನೆಗೊಂಡಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಎಟಿಎಂ ಅನ್ನು ಉದ್ಘಾಟಿಸಿ ಮಾತನಾಡಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಆಸ್ತಿಯೆಂದರೆ ಅದು ನವೋದಯ ಸ್ವ-ಸಹಾಯ ಸಂಘದ ಮಹಿಳೆಯರು. ಎಸ್.ಸಿ.ಡಿ.ಸಿ.ಸಿಯು ಎಲ್ಲಾ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಗಿಂತ ಹೆಚ್ಚು ಬಡ್ಡಿಯನ್ನು (8%) ಠೇವಣಿದಾರರಿಗೆ […]