ಮಣಿಪಾಲ: ಜೀನ್-ಲುಕ್ ಗೊಡಾರ್ಡ್ ರ ಬ್ರೆಥ್ ಲೆಸ್ ಚಲನಚಿತ್ರ ಪ್ರದರ್ಶನ

ಮಣಿಪಾಲ: ಇತ್ತೀಚಿಗೆ ನಿಧನರಾದ ಖ್ಯಾತ ಚಲನಚಿತ್ರ ನಿರ್ದೇಶಕ ಜೀನ್-ಲುಕ್ ಗೊಡಾರ್ಡ್ ಅವರ ಗೌರವಾರ್ಥವಾಗಿ ಅವರ ಪ್ರಸಿದ್ಧ ಚಲನಚಿತ್ರ ‘ಬ್ರೆಥ್ ಲೆಸ್’ ಪ್ರದರ್ಶನ ಮತ್ತು ಗೊಡಾರ್ಡ್ ಕುರಿತ ವಿಶೇಷ ಸಂವಾದವು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್), ಆಶ್ರಯದಲ್ಲಿ ಸೆಪ್ಟೆಂಬರ್ 24, ಶನಿವಾರ ಬೆಳಿಗ್ಗೆ 10.00 ಗಂಟೆಗೆ ಮಣಿಪಾಲದ ಹಳೆಯ ಟ್ಯಾಪ್ಮಿ ಕಟ್ಟಡದ ತರಗತಿ ಕೊಠಡಿ-2ರಲ್ಲಿ ನಡೆಯಲಿದೆ. ಲೇಖಕರು ಮತ್ತು ಉಡುಪಿ ಚಿತ್ರ ಸಮಾಜದ ಮತ್ತು ಸಂಚಾಲಕರಾದ ಪ್ರೊ.ಫಣಿರಾಜ್ ಅವರು ಚಿತ್ರವನ್ನು ಪರಿಚಯಿಸಿ […]
ಯುನೆಸ್ಕೋ ಶಾಂತಿ ಪೀಠದ ಮುಖ್ಯಸ್ಥ ಪ್ರೊ.ಎಂ.ಡಿ.ನಲಪತ್ ಜೊತೆ ಸಂವಾದ ಕಾರ್ಯಕ್ರಮ

ಮಣಿಪಾಲ: ನಾವು ಜೀವಿಸುತ್ತಿರುವ ನೈಜ ಪ್ರಪಂಚ ನೈತಿಕ ಮತ್ತು ಆದರ್ಶದ ಜಗತ್ತಲ್ಲ, ಆದರೆ ಶಾಂತಿಪ್ರಿಯ ನಾಗರಿಕರಾದ ನಾವು ಶಾಂತಿ ಸ್ಥಾಪನೆಗಾಗಿ ಸಾಮೂಹಿಕ ಪ್ರಯತ್ನ ಮಾಡಲೇಬೇಕು ಎಂದು ಯುನೆಸ್ಕೋ ಶಾಂತಿ ಪೀಠದ ಮುಖ್ಯಸ್ಥ ಪ್ರೊ.ಎಂ.ಡಿ.ನಲಪತ್ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಸಂಪನ್ಮೂಲಗಳ ಮೇಲಿನ ಪ್ರಾಬಲ್ಯ ಮತ್ತು ನಿಯಂತ್ರಣ ಸಾಧಿಸುವ ಪ್ರಯತ್ನಗಳೇ ಈ ಹಿಂದೆ ಯುದ್ಧಗಳಿಗೆ ಕಾರಣವಾಗಿದೆ ಮತ್ತು ನೈಜ ಜಗತ್ತು ನೈತಿಕ ಜಗತ್ತಲ್ಲ ಆದರೆ ನಾವು […]
ಮಣಿಪಾಲ: ಮೀನು ಹಿಡಿಯಲು ಹೋದ ವ್ಯಕ್ತಿ ಕೆರೆಗೆ ಬಿದ್ದು ಸಾವು

ಮಣಿಪಾಲ: ಮೀನು ಹಿಡಿಯಲು ಹೋದ ವ್ಯಕ್ತಿಯೋರ್ವರು ಮಣಿಪಾಲದ ಮಣ್ಣಪಳ್ಳ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಕುಂದಾಪುರದ ಪ್ರಕಾಶ್ (35) ಎಂದು ಗುರುತಿಸಲಾಗಿದೆ. ಇವರು ಮಣ್ಣಪಳ್ಳ ಕೆರೆಯಲ್ಲಿ ಗಾಳಹಾಕಿ ಮೀನು ಹಿಡಿಯುತ್ತಿದ್ದ ವೇಳೆ ಆಯತಪ್ಪಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಹಾಗೂ ಮಣಿಪಾಲ ಠಾಣಾಧಿಕಾರಿ ರಾಜಶೇಖರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ನೆರವಾದರು.
ಎಂಐಟಿಯ ತಾಂತ್ರಿಕ ಶಿಕ್ಷಕ ಡಾ. ಮನೋಹರ ಪೈ ಗೆ ರಾಷ್ಟ್ರೀಯ ಪ್ರಶಸ್ತಿ

ಮಣಿಪಾಲ: ಭಾರತದ ಶಿಕ್ಷಣ ಸಚಿವಾಲಯದ ತಾಂತ್ರಿಕ ಶಿಕ್ಷಕರ ವಿಭಾಗದಲ್ಲಿ ನೀಡುವ ರಾಷ್ಟ್ರೀಯ ಪ್ರಶಸ್ತಿಯು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ತಾ ಮತ್ತು ಸಂವಹನ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಮನೋಹರ ಪೈ ಎಂ.ಎಂ, ಇವರಿಗೆ ಲಭಿಸಿದೆ. ಸೆಪ್ಟೆಂಬರ್ 6 ರಂದು ದೆಹಲಿಯ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ .ಮನೋಹರ ಪೈ ಅವರಿಗೆ ಪ್ರಶಸ್ತಿ ನೀಡಲಾಯಿತು. ಭಾರತ ಸರ್ಕಾರದ ಶಿಕ್ಷಣ ರಾಜ್ಯ ಸಚಿವೆ ಶ್ರೀಮತಿ ಅನ್ನಪೂರ್ಣ ದೇವಿ, ರಾಜ್‌ಕುಮಾರ್ ರಂಜನ್ ಸಿಂಗ್, ಡಾ. ಸುಭಾಷ್ […]
ಏಕ ಬಳಕೆಯ ಪೆನ್ನುಗಳಿಂದ ಮುಕ್ತಿ ಪಡೆಯಲು ಮಾಹೆಯ ‘ರಿ-ಪೆನ್’ ಯೋಜನೆ

ಮಣಿಪಾಲ: ಏಕ ಬಳಕೆಯ ಪೆನ್ನುಗಳ ಬಳಕೆಯನ್ನು ನಿರುತ್ಸಾಹಗೊಳಿಸುವ ಮತ್ತು ಮರುಪೂರಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ‘ರಿ-ಪೆನ್’ ಎಂಬ ಸಿ. ಎಸ್. ಆರ್ ಪ್ರಾಯೋಜಿತ ಯೋಜನೆಯನ್ನು ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ.ವೆಂಕಟೇಶ್ ಇವರು ಉದ್ಘಾಟಿಸಿದರು. ಈ ‘ರಿ-ಪೆನ್’ ಯೋಜನೆಯನ್ನು ಕೈಗೆತ್ತಿಕೊಳ್ಳಲು ಪುತ್ತೂರಿನ ಶ್ಯಾಮಾ ಜ್ಯುವೆಲ್ಸ್ ಪ್ರೈ. ಲಿ ಸಂಸ್ಥೆಯು ತನ್ನ ಸಿ. ಎಸ್. ಆರ್ ನಿಧಿಯಿಂದ ಆರ್ಥಿಕ ಸಹಾಯವನ್ನು ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್‌ನ ಇಕೋ ಕ್ಲಬ್ ಗೆ ನೀಡಿದೆ. ಪರಿಸರದ ಉಳಿವಿಗಾಗಿ ಇಂಗಾಲಾಮ್ಲದ […]