ಸಿದ್ಧಾಂತದ ಹೆಸರಿನಲ್ಲಿ ಪರದೆಯ ಮೇಲೆ ಹಿಂಸೆಯನ್ನು ಅನುಮೋದಿಸುವುದು ಕಳವಳಕಾರಿ: ರಘನಂದನ್

ಉಡುಪಿ: ಇಂದು ಸಿನಿಮಾದಲ್ಲಿನ ಹಿಂಸೆಯ ಸ್ವರೂಪ ಬದಲಾಗುತ್ತಿದ್ದು, ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿರುವ ನಾಯಕ ಪಾತ್ರಗಳೇ ಹೆಚ್ಚುತ್ತಿವೆ. ಸಿದ್ಧಾಂತದ ಹೆಸರಿನಲ್ಲಿ ಪರದೆಯ ಮೇಲೆ ಹಿಂಸೆಯನ್ನು ಅನುಮೋದಿಸುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ ಎಂದು ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ರಘುನಂದನ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ‘ಸಿನೆಮಾದಲ್ಲಿ ಫ್ಯಾಸಿಸಂ’ ಎಂಬ ವಿಷಯದ ಕುರಿತು ಮಾತನಾಡಿದ ರಘುನಂದನ, ಜನಪ್ರಿಯ ಸಿನಿಮಾ ಪ್ರಕಾರವು ನಮ್ಮ ಸಮಾಜದ ಕೆಲವು ಪ್ರವೃತ್ತಿಗಳನ್ನು ಪ್ರತಿಬಿಂಬಿಸುತ್ತದೆ. ಕಾನೂನಿನ ಮೇಲಿನ ಗೌರವದಿಂದ ದೂರ […]

ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಟೀಚರ್ಸ್ ಟ್ರೈನಿಂಗ್ ಪ್ರವೇಶಾತಿ ಪಡೆಯಲು ಅ.20 ಕೊನೆಯ ದಿನ

ಮಣಿಪಾಲ: ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಮಣಿಪಾಲದಲ್ಲಿ ಮಹಿಳೆಯರಿಗೆ ಮಾಂಟೆಸ್ಸರಿ/ನರ್ಸರಿ ಟೀಚರ್ ಟ್ರೈನಿಂಗ್ ಕೋರ್ಸಿಗೆ ಪ್ರವೇಶಾತಿ (2022-23) ಪ್ರಕ್ರಿಯೆ ಆರಂಭವಾಗಿದ್ದು, ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಅಭ್ಯರ್ಥಿಗಳು ಈ ತರಬೇತಿಗೆ ಪ್ರವೇಶ ಪಡೆದುಕೊಳ್ಳಬಹುದು. ಕೇವಲ ಕೆಲವೇ ಸೀಟುಗಳು ಲಭ್ಯವಿದ್ದು, ಆಸಕ್ತಿಯಿರುವವರು, ಹೆಚ್ಚಿನ ಮಾಹಿತಿಗಾಗಿ ಶ್ರೀ ಶಾರದಾ ಟ್ರೈನಿಂಗ್ ಇನ್ಸ್ಟಿಟ್ಯೂಟ್, ಡಿ.ಸಿ ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಇಂದ್ರಾಳಿ ರಸ್ತೆ ಕಾಮಗಾರಿ: ಘನ ವಾಹನಗಳಿಗೆ ಪರ್ಯಾಯ ಮಾರ್ಗ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169ಎ ಕಿ.ಮೀ 76.040 ರಿಂದ ಕಿ.ಮೀ 85.200 ವರೆಗೆ ಚತುಷ್ಪಥ ಕಾಮಗಾರಿ ಇಂದ್ರಾಳಿ ರೈಲ್ವೇ ಸೇತುವೆ ಬಳಿ ಬಾಕಿ ಇರುವ ಕಾಂಕ್ರೀಟೀಕರಣ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಇಂದ್ರಾಳಿ ರೇಲ್ವೆ ಸೇತುವ ಮೂಲಕ ಭಾರೀ ವಾಹನ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಿದ್ದು, ವಾಹನಗಳ ದಟ್ಟಣಿಕೆಯಿಂದ ಸುಗಮ ಸಂಚಾರಕ್ಕೆ ಉಳಿದ ವಾಹನಗಳಿಗೆ ಅಡಚಣೆಯಗುತ್ತಿರುವ ಹಿನ್ನಲೆ ಇತರ ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕೆಂದು ಸೂಚಿಸಲಾಗಿದೆ. ಕುಂದಾಪುರ ಕಡೆಯಿಂದ ಬರುವ ಘನವಾಹನಗಳು ಅಂಬಾಗಿಲು-ಪೆರಂಪಳ್ಳಿ-ಮಣಿಪಾಲ ರಸ್ತೆಯ ಮೂಲಕ ಚಲಿಸುವುದು. ಉಡುಪಿಯಿಂದ ಬರುವ […]

ವ್ಯಾಂಡಿಸ್ ಸೀಕ್ರೆಟ್ಸ್ ಒಳ ಉಡುಪುಗಳ ಮಳಿಗೆ ಉದ್ಘಾಟನೆ

ಮಣಿಪಾಲ: ಇಲ್ಲಿನ ಸಿಂಡಿಕೇಟ್ ಸರ್ಕಲ್‌ನ ಸಾಯಿ ರಾಮ್ ಮಾಲ್ ಬಳಿಯ ಸಾಯಿ ಕೃಪಾ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್‌ನಲ್ಲಿ ಅಕ್ಟೋಬರ್ 16 ರಂದು ವ್ಯಾಂಡಿಸ್ ಸೀಕ್ರೆಟ್ಸ್ ಒಳ ಉಡುಪು ಮಳಿಗೆಯನ್ನು ಉದ್ಘಾಟಿಸಲಾಯಿತು. ಉಡುಪಿ ಜಿಲ್ಲೆಯಲ್ಲಿ ಎಲ್ಲಾ ರೀತಿಯ ಒಳ ಉಡುಪುಗಳು ದೊರೆಯುವ ಮಳಿಗೆ ಇದಾಗಿದ್ದು, ಈ ಸಾಹಸೋದ್ಯಮದಲ್ಲಿ ಯಶಸ್ಸು ಸಾಧಿಸುವ ನಿರೀಕ್ಷೆಯಲ್ಲಿರುವುದಾಗಿ ಮಳಿಗೆಯ ಮಾಲಕಿ ಶ್ರೀಮತಿ ವಂದಿತಾ ಕಾಮತ್ ತಿಳಿಸಿದ್ದಾರೆ. ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಚಿಪ್ಸಿ ಐಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಶಾಂಭವಿ ಭಂಡಾರ್ಕರ್ ಮತ್ತು ಮಣಿಪಾಲ […]

ಮಾಹೆ: ಮೊದಲ ಮಾದರಿ ವಿಶ್ವಸಂಸ್ಥೆ ಕಾರ್ಯಕ್ರಮ ಆಯೋಜನೆ

ಮಣಿಪಾಲ: ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ನಲ್ಲಿರುವ ಮಣಿಪಾಲ್ ಅಸೋಸಿಯೇಷನ್ ​​ಆಫ್ ಫಾರ್ಮಸಿ ಸ್ಟೂಡೆಂಟ್ಸ್, ಇಂಟರ್ ನ್ಯಾಶನಲ್ ಫಾರ್ಮಾಸ್ಯುಟಿಕಲ್ ಸ್ಟುಡೆಂಟ್ಸ್ ಫೆಡರೇಷನ್, ವಿಶ್ವ ಆರೋಗ್ಯ ಅಸೆಂಬ್ಲಿ ಸಮಿತಿ ತಮ್ಮ ಮೊದಲ ಮಾದರಿ ವಿಶ್ವಸಂಸ್ಥೆ ಅನ್ನು ಆಯೋಜಿಸಿತು. “ಮಾನವೀಯ ತುರ್ತುಸ್ಥಿತಿಗಳಲ್ಲಿ ರೋಗ ನಿಯಂತ್ರಣ”ವು ವಿಶ್ವಸಂಸ್ಥೆಯ ಪರಿಹಾರ ಕಾರ್ಯಸೂಚಿಯಾಗಿತ್ತು. ಸಾರ್ವಜನಿಕ ಆರೋಗ್ಯದ ಸುಧಾರಣೆಯನ್ನು ಪ್ರತಿಪಾದಿಸಲು ಈ ವೇದಿಕೆಯು ವಿದ್ಯಾರ್ಥಿಗಳಿಗೆ ಜಾಗತಿಕ ಆರೋಗ್ಯ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವನ್ನು ಒದಗಿಸಿತು. ರಾಜತಾಂತ್ರಿಕತೆ ಮತ್ತು ನಾಯಕತ್ವ ಕೌಶಲ್ಯಗಳಲ್ಲಿ ಆಳವಾದ ಜ್ಞಾನವನ್ನು […]