ಮಲ್ಪೆ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ ವತಿಯಿಂದ ಮರಳು ಶಿಲ್ಪ ಕಲೆ ಅನಾವರಣ

ಮಲ್ಪೆ: ವಿಶ್ವದಾದ್ಯಂತ ಪಾರ್ಶ್ವವಾಯು ಸಂಭವವನ್ನು ಕಡಿಮೆ ಮಾಡಲು ಪ್ರತಿ ವರ್ಷ ಅಕ್ಟೋಬರ್ 29 ರಂದು ವಿಶ್ವ ಪಾರ್ಶ್ವವಾಯು ದಿನವನ್ನು ಆಚರಿಸಲಾಗುತ್ತದೆ. ಪಾರ್ಶ್ವವಾಯುವಿನಿಂದಾಗುವ ಗಂಭೀರ ಸ್ವರೂಪ, ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸಲು, ಪಾರ್ಶ್ವವಾಯುವಿನ ಅಪಾಯದ ಅಂಶಗಳು ಮತ್ತು ಚಿಹ್ನೆಗಳ ಬಗ್ಗೆ ಉತ್ತಮ ಸಾರ್ವಜನಿಕ ಅರಿವಿನ ಮೂಲಕ ಪಾರ್ಶ್ವವಾಯುವಿನ ಹೊರೆಯನ್ನು ಕಡಿಮೆ ಮಾಡುವ ವಿಧಾನಗಳ ಕುರಿತು ಮಾತನಾಡಲು ಉತ್ತಮ ಅವಕಾಶವನ್ನು ಈ ದಿನವು ಕಲ್ಪಿಸಿದೆ. ಈ ದಿನದ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನರವಿಜ್ಞಾನ ವಿಭಾಗವು […]

ಡಾ. ವಿ.ಎಸ್. ಆಚಾರ್ಯ ಅವರ ಪುತ್ಥಳಿ ಬಳಿ ಮುಗಿಲು ಮುಟ್ಟಿದ ಕೋಟಿ ಕಂಠ ಗಾಯನ

ಮಣಿಪಾಲ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ‌ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮವು ಶುಕ್ರವಾರದಂದು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗಳ ಕಛೇರಿ ಮುಂಬಾಗದಲ್ಲಿರುವ ಡಾ. ವಿ.ಎಸ್. ಆಚಾರ್ಯ ಅವರ ಪುತ್ಥಳಿ ಬಳಿ ನಡೆಯಿತು. ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಕನ್ನಡ ಶಾಲು ಮತ್ತು ಟೋಪಿಗಳನ್ನು ಧರಿಸಿ ರಾಜ್ಯ […]

ಕಲಾವಿದ ಸತೀಶ್ಚಂದ್ರ ಅವರ ಕುಂಚದಿಂದ ಮೂಡಿಬಂತು ಕಾಂತಾರದ ಪಂಜುರ್ಲಿ ದೈವ!

ಮಣಿಪಾಲ: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ ಮಾಡಿದ ಭೂತಾರಾಧನೆ ಕುರಿತ ಕಾಂತಾರ ಚಿತ್ರದ ಪಂಜುರ್ಲಿ ದೈವದ ಅಕ್ರಿಲಿಕ್ ಚಿತ್ರವನ್ನು ಮಣಿಪಾಲದ ಕಲಾವಿದ ಸತೀಶ್ಚಂದ್ರ ಅವರು ಅದ್ಭುತವಾಗಿ ಕುಂಚದಲ್ಲಿ ಸೆರೆಹಿಡಿದಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ. ದೈವದ ಕಾಲಿನ ಗಗ್ಗರ ಇವರ ಕೈ ಚಳಕದ ಸ್ವಂತ ರಚನೆಯಾಗಿದೆ. ಸತೀಶ್ಚಂದ್ರ ಲಯನ್ಸ್ ಸಂಸ್ಥೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾಗಿದ್ದರು. ತರಂಗ ವಾರಪತ್ರಿಕೆಯಲ್ಲಿ ಇವರ ಚಿತ್ರಗಳು ಪ್ರಕಟವಾಗುತ್ತಿರುತ್ತವೆ.

ಮಣಿಪಾಲ: ಡಾ. ವಿ‌.ಎಸ್.ಆಚಾರ್ಯ ಪುತ್ಥಳಿ ಬಳಿ “ಕೋಟಿ ಕಂಠ ಗಾಯನ”

ಮಣಿಪಾಲ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ‌ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅ.28ರಂದು ರಾಜ್ಯಾದ್ಯಂತ ಹಮ್ಮಿಕೊಂಡಿರುವ “ಕೋಟಿ ಕಂಠ ಗಾಯನ” ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ವಿನೂತನ ರೀತಿಯಲ್ಲಿ ಭಾಗವಹಿಸಲಿದೆ. ಅ.28 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಮಣಿಪಾಲದ ರಜತಾದ್ರಿ ಬಳಿ ಇರುವ ಡಾ. ವಿ.ಎಸ್. ಆಚಾರ್ಯರವರ ಪುತ್ಥಳಿಯ ಬಳಿ ಸುಮಾರು 500 ಮಂದಿ ಬಿಜೆಪಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಸೇರಿ ‘ಕನ್ನಡ ಶಾಲು ಮತ್ತು […]

ಮಣಿಪಾಲ: ಮಾಹೆಯ ಆರ್ಕಿಟೆಕ್ಚರ್ ವಿಭಾಗದಿಂದ ಡಾ. ವಿ ಎಸ್ ಆಚಾರ್ಯ ರಸ್ತೆ ವಿನ್ಯಾಸ

ಮಣಿಪಾಲ: ನಗರ ಭೂ ಸಾರಿಗೆ ನಿರ್ದೇಶನಾಲಯ ಅಡಿಯಲ್ಲಿ ನೋಂದಾಯಿತವಾಗಿರುವ ಕೆ.ಎನ್.ಎಮ್.ಟಿ.ಎ ಯು ಕರ್ನಾಟಕದ ಶ್ರೇಣಿ 2 ಮತ್ತು ಶ್ರೇಣಿ 3 ರ ನಗರಗಳಲ್ಲಿ ಬೀದಿ ನಡಿಗೆಗಳನ್ನು ಸುಧಾರಿಸಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಬೀದಿಗಳ ವಿನ್ಯಾಸ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಮಾಜದ ಎಲ್ಲಾ ಪಾಲುದಾರರ ಸಹಯೋಗವನ್ನು ಕೆ.ಎನ್.ಎಮ್.ಟಿ.ಎ ಹೊಂದಿದೆ. ಈ ನಿಟ್ಟಿನಲ್ಲಿ, ಉಡುಪಿ ನಗರ ಪಾಲಿಕೆಯು, ಡಾ.ವಿ.ಎಸ್.ಆಚಾರ್ಯ ರಸ್ತೆಯ ವಿನ್ಯಾಸ ಅಭಿವೃದ್ಧಿ ಪಡಿಸಲು ಇಚ್ಛೆ ವ್ಯಕ್ತಪಡಿಸಿದೆ. ಸಿಂಡಿಕೇಟ್ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಸರಿಸುಮಾರು 1.8 ಕಿಮೀ ಉದ್ದದ ರಸ್ತೆ […]