ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹಕ್ಕಾಗಿ ಸೈಕಲ್ ಜಾಥಾ

ಮಣಿಪಾಲ: ವಿಶ್ವ ಆಂಟಿಮೈಕ್ರೊಬಿಯಲ್ ಜಾಗೃತಿ ಸಪ್ತಾಹ 2022 ಅಂಗವಾಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಭಾನುವಾರದಂದು ಸೈಕಲ್ ಜಾಥಾ ನಡೆಯಿತು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗದ ಮುಂಭಾಗದಲ್ಲಿ ಮಾಹೆ ಮಣಿಪಾಲದ ಉಪಕುಲಪತಿ, ಲೆಫ್ಟಿನೆಂಟ್ ಜನರಲ್ (ಡಾ) ಎಂ.ಡಿ.ವೆಂಕಟೇಶ್ ಅವರು ಚಾಲನೆ ನೀಡಿದರು. ಮಹಾರಾಷ್ಟ್ರ ದ ನಾಸಿಕ್ ನ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಲೆ. ಜ. (ಡಾ ) ಮಾಧುರಿ ಕಾನಿಟ್ಕರ್, ಕೆ ಎಂ ಸಿ ಡೀನ್ ಡಾ ಶರತ್ ಕುಮಾರ್ ರಾವ್, ಸಹ ಡೀನ್ ಡಾ […]
ನ. 24 ರಂದು ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ

ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನವೆಂಬರ್ 24 ರಂದು ಬೆಳಗ್ಗೆ 10.30 ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಬಿ.ಸಿ.ಎ, ಬಿ.ಸಿ.ಎಸ್. ಎಮ್.ಸಿ.ಎ, ಬಿ.ಕಾಂ ಬಿ.ಎಸ್ಸಿ ಎಮ್.ಎಸ್ಸಿ, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಉದ್ಯೋಗ […]
ಮೋದಿ ಕನಸಿನ ಸದೃಢ ಸ್ವಾವಲಂಬಿ ‘ಹೊಸ ಭಾರತ’ಕ್ಕಾಗಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ: ರಾಜನಾಥ್ ಸಿಂಗ್

ಮಣಿಪಾಲ: ಯುವಕರು ಹೊಸ ಆವಿಷ್ಕಾರ, ತಂತ್ರಜ್ಞಾನಗಳನ್ನು ಅಭಿವೃದ್ದಿ ಪಡಿಸಿ ಹೊಸ ಕಂಪನಿ, ಸಂಶೋಧನಾ ಸಂಸ್ಥೆ ಮತ್ತು ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲಿಷ್ಠ ಮತ್ತು ಸ್ವಾವಲಂಬಿ ‘ಹೊಸ ಭಾರತ’ದ ಕನಸನ್ನು ಸಾಕಾರಗೊಳಿಸಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ ಕರೆ ನೀಡಿದರು. ಅವರು ಶುಕ್ರವಾರದಂದು ಮಾಹೆಯ 30 ನೇ ಘಟಿಕೋತ್ಸವದ ಮೊದಲನೆ ದಿನ ಮತ್ತು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್‌ನ ಹೊಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಯುವಕರ ಶಕ್ತಿಯನ್ನು ಜಗತ್ತೇ ಗುರುತಿಸುತ್ತಿದೆ. […]
ಶೇಕ್ಸ್‌ಪಿಯರ್ ನಾಟಕಗಳಲ್ಲಿ ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನ ಚಿತ್ರಣವಿದೆ: ಪ್ರೊ.ಎನ್. ಮನು ಚಕ್ರವರ್ತಿ

ಮಣಿಪಾಲ: ಶೇಕ್ಸ್‌ಪಿಯರ್ ತನ್ನ ದುರಂತ ನಾಟಕಗಳಲ್ಲಿ ತನ್ನ ಕಾಲದ ಸಾಮಾಜಿಕ ಜೀವನದಲ್ಲಿ ನೈತಿಕತೆ ಹೇಗೆ ಕ್ರಮೇಣ ಮಾಯವಾಗ ತೊಡಗಿತು ಎಂಬುದನ್ನು ತೋರಿಸಲು ಪ್ರಯತ್ನಿಸಿದ್ದಾನೆ. ನೈತಿಕತೆ ಮತ್ತು ರಾಜಕೀಯ ನೈಜ ಜಗತ್ತಿನಲ್ಲಿ ಎರಡು ಪ್ರತ್ಯೇಕ ಭಾಗಗಳು ಎಂದು ಅವನು ಚಿತ್ರಿಸಿದ್ದಾನೆ ಎಂದು ಖ್ಯಾತ ಸಂಸ್ಕೃತಿ ವಿಮರ್ಶಕ ಪ್ರೊ.ಎನ್. ಮನು ಚಕ್ರವರ್ತಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಯೋಜಿಸಿದ್ದ “ಶೇಕ್ಸ್‌ಪಿಯರ್ ಜಗತ್ತು” ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ಶೇಕ್ಸ್‌ಪಿಯರ್ ತನ್ನ ನಾಟಕಗಳಲ್ಲಿ ಒಳಸಂಚುಗಳು, […]
ನ. 18-20 ರವರೆಗೆ ಮಾಹೆಯ 30 ನೇ ಘಟಿಕೋತ್ಸವ ಕಾರ್ಯಕ್ರಮ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿ

ಮಣಿಪಾಲ: ಮಾಹೆಯ 30 ನೇ ಘಟಿಕೋತ್ಸವ ಕಾರ್ಯಕ್ರಮವು ನವೆಂಬರ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ನಡೆಯಲಿದ್ದು, ಈ ಸಂದರ್ಭದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಶೈಕ್ಷಣಿಕ ಕ್ಷೇತ್ರದ ಅನೇಕ ಸಾಧ್ಯತೆಗಳ ಕುರಿತು ಚರ್ಚೆಗಳು ನಡೆಯಲಿದ್ದು ಸುಮಾರು ಐದು ಸಾವಿರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಮಾಹೆ ಸಹ ಕುಲಪತಿ ಎಚ್.ಎಸ್ ಬಲ್ಲಾಳ್ ಇಂದು ನಡೆದ ರಾಷ್ಟೀಯ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು. ಘಟಿಕೋತ್ಸವದ ಮೊದಲ ದಿನ-ನವೆಂಬರ್ 18 ರಂದು ಭಾರತದ ರಕ್ಷಣಾ ಸಚಿವ ರಾಜನಾಥ್ […]