ಸಂಚಾರಿ ಪೋಲೀಸ್ ಮತ್ತು ಚಾಲಕರಿಗೆ ತುರ್ತು ಪರಿಸ್ಥಿತಿ ಪ್ರಥಮ ಪ್ರತಿಕ್ರಿಯೆ ತರಬೇತಿ ಕಾರ್ಯಾಗಾರ

ಮಣಿಪಾಲ: ಉಡುಪಿ ಜಿಲ್ಲಾ ಪೊಲೀಸ್, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ (CCIF) ಮತ್ತು ಕೆಎಂಸಿ ಮಣಿಪಾಲದ ತುರ್ತು ವೈದ್ಯಕೀಯ ವಿಭಾಗದ ಸಹಯೋಗದೊಂದಿಗೆ ಟ್ರಾಫಿಕ್ ಪೊಲೀಸ್ ಮತ್ತು ಚಾಲಕರಿಗೆ ಪ್ರಥಮ ಪ್ರತಿಕ್ರಿಯೆ ನೀಡುವುದರ ಬಗ್ಗೆ ತರಬೇತಿ ಕಾರ್ಯಾಗಾರವನ್ನು ಮೇ . 30 ರಂದು ಡಾ. ಟಿಎಂಎ ಪೈ ಹಾಲ್ ನಲ್ಲಿ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹಾಕೆ ಅಕ್ಷಯ್ ಮಚ್ಚಿಂದ್ರ ಭಾಗವಹಿಸಿ ಮಾತನಾಡಿ, ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ […]

ಆರೋಗ್ಯ ಮತ್ತು ಕ್ಷೇಮ ಕೇಂದ್ರದ ಅಧಿಕಾರಿಗಳಿಗೆ ನೇತ್ರ ಸಂಬಂಧಿ ಕಾಯಿಲೆ- ಅಂಧತ್ವ ನಿಯಂತ್ರಣ ಕುರಿತು ಕಾರ್ಯಾಗಾರ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಹಾಗೂ ಜಿಲ್ಲಾ ಅಂಧತ್ವ ನಿಯಂತ್ರಣ ಘಟಕ ಉಡುಪಿ ಜಿಲ್ಲೆ ಇದರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರ ಏರ್ಪಡಿಸಿತ್ತು. ಕಾರ್ಯಾಗಾರದಲ್ಲಿ ನೇತ್ರ ಮತ್ತು ಸಂಬಂಧಿತ ಕಾಯಿಲೆಗಳ ಶಿಕ್ಷಣ ಹಾಗೂ ಅಂಧತ್ವ ನಿಯಂತ್ರಣ ಕಾರ್ಯಕ್ರಮದ ಕುರಿತು ಶಿಕ್ಷಣ ನೀಡಲಾಯಿತು. ಮಾಹೆ ಮಣಿಪಾಲದ ಇಂಟರಾಕ್ಟ್ ಸಭಾಂಗಣದಲ್ಲಿ ನಡೆದ […]

ವಿಶ್ವ ಥಲಸ್ಸೆಮಿಯಾ ದಿನದ ಅಂಗವಾಗಿ ಕೆ.ಎಂಸಿಯಲ್ಲಿ ಎಚ್ಎಲ್ಎ ಪರೀಕ್ಷಾ ಶಿಬಿರ

ಮಣಿಪಾಲ: ಜಾಗತಿಕವಾಗಿ ಥಲಸ್ಸೆಮಿಯಾ ಕಾಯಿಲೆ ಕುರಿತು ಜಾಗೃತಿ ಮೂಡಿಸಲು ಮತ್ತು ಥಲಸ್ಸೆಮಿಯಾ ಪೀಡಿತ ಮಕ್ಕಳಿಗೆ ತಮ್ಮ ಆರೈಕೆದಾರರಿಗೆ ಬೆಂಬಲ ವ್ಯಕ್ತಪಡಿಸಲು ಪ್ರತಿ ವರ್ಷ ವಿಶ್ವ ಥಲಸ್ಸೆಮಿಯಾ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೇಯವಾಕ್ಯ ‘”ಎಚ್ಚರಿಕೆಯಿಂದಿರಿ, ಹಂಚಿಕೊಳ್ಳಿ ಕಾಳಜಿ: ಥಲಸ್ಸೆಮಿಯಾ ಕುರಿತು ಆರೈಕೆಯ ಅಂತರವನ್ನು ತಗ್ಗಿಸಲು ಶಿಕ್ಷಣವನ್ನು ಬಲಪಡಿಸುವುದು”. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ರಕ್ತಶಾಸ್ತ್ರ ಮತ್ತು ಕ್ಯಾನ್ಸರ್ ವಿಭಾಗವು ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಡಿಕೆಎಂಎಸ್ ಸಹಕಾರದೊಂದಿಗೆ ಎಚ್‌ಎಲ್‌ಎ ಪರೀಕ್ಷಾ ಶಿಬಿರವನ್ನು ನಡೆಸಿತು. ಶಿಬಿರದಲ್ಲಿ ರೋಗಿಗಳು ಮತ್ತು ಸಂಭಾವ್ಯ […]

ಎಂಐಟಿ ಅಕಾಡೆಮಿಕ್ಸ್ ವಿಭಾಗದ ಶ್ರೀಮತಿ ಮನೋರಮಾ ಅವರಿಗೆ ಬೀಳ್ಕೊಡುಗೆ

ಮಣಿಪಾಲ: ಎಂಐಟಿಯಲ್ಲಿ 35 ವರ್ಷಗಳಿಂದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಇದೀಗ ಅಕಾಡೆಮಿಕ್ಸ್ ವಿಭಾಗದಿಂದ ನಿವೃತ್ತಿ ಹೊಂದಿದ್ದ ಸಿಬ್ಬಂದಿ ಶ್ರೀಮತಿ ಮನೋರಮಾ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಸಂಸ್ಥೆಯ ನಿರ್ದೇಶಕ ಕಮಾಂಡರ್ ಡಾ. ಅನಿಲ್ ರಾಣಾ, ಜಂಟಿ ನಿರ್ದೇಶಕ ಡಾ. ಸೋಮಶೇಖರ್ ಭಟ್, ಸಹ ನಿರ್ದೇಶಕ( ಅಕಾಡೆಮಿಕ್ಸ್) ಡಾ. ರವಿರಾಜ್ ಅಧಿಕಾರಿ, ಅಕಾಡೆಮಿಕ್ಸ್ ವಿಭಾಗದ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕಲೆ ವಿಶ್ವ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ: ಮೆರ್ಲಿ ಬರ್ಲಾನ್

ಮಣಿಪಾಲ: ಕಲೆ ವಿಶ್ವದಾದ್ಯಂತ ಸಂಪರ್ಕ ಸಾಧಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವ ಶಾಂತಿಯ ಅಂತರರಾಷ್ಟ್ರೀಯ ಮಹಿಳಾ ಒಕ್ಕೂಟ (WFWPI) ಯುಎನ್ ಸಂಬಂಧಗಳ (ನ್ಯೂಯಾರ್ಕ್) ನಿರ್ದೇಶಕಿ ಮೆರ್ಲಿ ಬರ್ಲಾನ್ ಹೇಳಿದರು. ಅವರು ವಿಶ್ವ ಶಾಂತಿಯ ಅನ್ವೇಷಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಆಯೋಜಿಸಿದ ಮಣಿಪಾಲದ ವಿಶೇಷಚೇತನ ಮಕ್ಕಳ ವಿಶೇಷ ಮನೆಯಾದ ‘ಆಸರೆ’ಯನ್ನು ಬೆಂಬಲಿಸುವ ಸಾಂಸ್ಕೃತಿಕ ಸಂಜೆ ‘ಆರ್ಟ್ ಫಾರ್ ಪೀಸ್’ […]