ರಾಜೀವನಗರ ಕ್ರಿಕೆಟರ್ಸ್: ಎರಡು ದಿನಗಳ ‘ಆರ್ ಸಿ ಟ್ರೋಫಿ-2021’ ಚಾಲನೆ

ಮಣಿಪಾಲ: ರಾಜೀವನಗರ ಕ್ರಿಕೆಟರ್ಸ್ ರಾಜೀವನಗರ ಸಂಸ್ಥೆಯ ಆಶ್ರಯದಲ್ಲಿ ಅಂಗವಿಕಲ ಹಾಗೂ ಬಡಜನರ ಸಹಾಯಾರ್ಥವಾಗಿ ರಾಜೀವನಗರ ಆರ್ ಸಿ ಮೈದಾನದಲ್ಲಿ ಆಯೋಜಿಸಿರುವ ಎರಡು ದಿನಗಳ 9ನೇ ವರ್ಷದ ಕ್ರಿಕೆಟ್ ಪಂದ್ಯಕೂಟ ‘ಆರ್ ಸಿ ಟ್ರೋಫಿ-2021’ ಶನಿವಾರ ಉದ್ಘಾಟನೆಗೊಂಡಿತು. ಟೂರ್ನಿಗೆ ಚಾಲನೆ ನೀಡಿ 80ಬಡಗಬೆಟ್ಟು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಶಾಂತಾರಾಮ ಶೆಟ್ಟಿ ಮಾತನಾಡಿ, ಆರ್ ಸಿ ತಂಡ ಕ್ರೀಡಾಕೂಟ ಆಯೋಜನೆಗೆ ಮಾತ್ರ ಸೀಮಿತವಾಗಿಲ್ಲ. ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ […]