ಡಿ. 27 ರಿಂದ 30ರವರೆಗೆ ಮಣಿಪಾಲ ಪದವಿಪೂರ್ವ ಕಾಲೇಜಿನ ಅಮೃತ ಮಹೋತ್ಸವ- ‘ಅಮೃತ ಪರ್ವ’ ಸಂಭ್ರಮ
ಉಡುಪಿ: ಮಣಿಪಾಲ ಹಾಗೂ ಉಡುಪಿ ಸುತ್ತಲಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1948ರಲ್ಲಿ ಪ್ರಾರಂಭಗೊಂಡ ಮಣಿಪಾಲ ಪದವಿ ಪೂರ್ವ ಕಾಲೇಜು ಇದೀಗ 75 ವರ್ಷಗಳನ್ನು ಪೂರ್ಣಗೊಳಿಸಿದ್ದು, ಅಮೃತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಡಿ. 27 ರಿಂದ 30 ರವರೆಗೆ ‘ಅಮೃತ ಪರ್ವ’ವನ್ನು ಆಚರಿಸಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ರೂಪ ಎಲ್.ಭಟ್ ತಿಳಿಸಿದ್ದಾರೆ. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1970ರವರೆಗೆ ಇದು ಮಣಿಪಾಲ ಹೈಸ್ಕೂಲ್ ಆಗಿದ್ದು, 1971ರಿಂದ ಪದವಿ ಪೂರ್ವ ತರಗತಿಗಳು ಪ್ರಾರಂಭಗೊಂಡು ಮಣಿಪಾಲ ಜೂನಿಯರ್ ಕಾಲೇಜಾಗಿ ಮೇಲ್ದರ್ಜೆಗೇರಿತು. […]