ಮಣಿಪಾಲ: ಅಕ್ರಮವಾಗಿ ಮನೆಯೊಳಗೆ ಪ್ರವೇಶಿಸಿ ವ್ಯಕ್ತಿಯ ಮೇಲೆ ಹಲ್ಲೆ; ದೂರು ದಾಖಲು

ಮಣಿಪಾಲ: ಮನೆಯೊಳಗೆ ಪ್ರವೇಶಿಸಿ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಮಾರುತಿ ನಗರದಲ್ಲಿ ನಡೆದಿದೆ. ಹೆರ್ಗ ಗ್ರಾಮದ ಶೆಟ್ಟಿಬೆಟ್ಟು ಮಾರುತಿ ನಗರದ ನಿವಾಸಿ ಸಂದೀಪ್ ಹಲ್ಲೆಗೊಳಗಾದ ವ್ಯಕ್ತಿ.‌ ಈ ಹಿಂದೆ ಸಂದೀಪ್ ಅವರು ಈಶ್ವರನಗರದ ಹರೀಶ್ ಪೂಜಾರಿ ಎಂಬವರ ಜೊತೆಗೂಡಿ ಉಡುಪಿಯಲ್ಲಿ ಬಟ್ಟೆ ಅಂಗಡಿ ವ್ಯವಹಾರ ನಡೆಸುತ್ತಿದ್ದರು. ಇದೇ ವಿಚಾರದಲ್ಲಿ‌ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ. ನ.24ರಂದು ಬೆಳಿಗ್ಗೆ ಹರೀಶ್ ಪೂಜಾರಿ, ಸಂದೀಪ್ ಮನೆಯ ಅಂಗಳಕ್ಕೆ ಬಂದು ಮನೆಯ ಕಾಲಿಂಗ್ ಬೆಲ್ ಹಾಕಿದ್ದಾನೆ. […]