ಮಣಿಪಾಲ: ಸ್ವಾಮೀಜಿಗಳಿಂದ ಪವಿತ್ರ ಸ್ವರ್ಣಾ ನದಿ ಸ್ನಾನ
ಉಡುಪಿ: ಮಣಿಪಾಲ ಪೆರಂಪಳ್ಳಿ ಸಮೀಪದ ಶೀಂಬ್ರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿಯ ಕೃಷ್ಣಾಂಗಾರಕ ಸ್ನಾನಘಟ್ಟದಲ್ಲಿ ಇಂದು ಪವಿತ್ರ ಸ್ವರ್ಣಾ ನದಿ ಸ್ನಾನ ನೆರವೇರಿತು. ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಪಲಿಮಾರು ವಿದ್ಯಾಧೀಶತೀರ್ಥ ಶ್ರೀಪಾದರು, ಸೋದೆ ಮಠದ ವಿಶ್ವವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀಪಾದರು ತೀರ್ಥಸ್ನಾನ ಮಾಡಿ ಸ್ವರ್ಣಾರತಿ ಬೆಳಗಿದರು. ಬೆಳಗ್ಗಿನಿಂದಲೇ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಮಂಡ್ಯ , ಚಿತ್ತೂರು ( ಆಂಧ್ರ) ಕೋಲಾರ ಪ್ರದೇಶಗಳಿಂದ ಆಗಮಿಸಿದ ನೂರಾರು ಭಕ್ತರು ಹಾಗೂ ಸ್ಥಳೀಯರು ಪವಿತ್ರ ನದೀ ಸ್ನಾನದಲ್ಲಿ […]