ಮಣಿಪಾಲ ಆರೋಗ್ಯ ಕಾರ್ಡ್ 2024ರ ನೊಂದಣಿ ಪ್ರಕ್ರಿಯೆ ಪ್ರಾರಂಭ;ಇಡೀ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ವಿಶ್ವಾಸಾರ್ಹ ಸೇವೆ
ಮಣಿಪಾಲ, ಜೂ.18: ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಅವರು ಇಂದಿನಿಂದ ಮಣಿಪಾಲ ಆರೋಗ್ಯ ಕಾರ್ಡ್ 2024 ನೋಂದಣಿಯನ್ನು ಪ್ರಾರಂಭವಾಗುತ್ತಿದೆ ಎಂದು ಘೋಷಿಸಿದರು. ಭಾರತೀಯ ಆರೋಗ್ಯ ವ್ಯವಸ್ಥೆಯಲ್ಲಿ ದಾರ್ಶನಿಕ ಎಂದು ಗುರುತಿಸಲ್ಪಡುವ ದಿವಂಗತ ಡಾ. ಟಿ.ಎಂ.ಎ. ಪೈ ಅವರ ಪರಿವರ್ತನಾ ಪ್ರಭಾವವನ್ನು ಪ್ರತಿಬಿಂಬಿಸುತ್ತ, ಡಾ. ಬಲ್ಲಾಳ್ ಅವರು ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮಾಡುವ ಕಾರ್ಡ್‌ನ ಧ್ಯೇಯವನ್ನು ಎತ್ತಿ ತೋರಿಸಿದರು. “ಡಾ. ಪೈ ಅವರು ಸಮಾಜಕ್ಕೆ ನೀಡಿದ ಸಮರ್ಪಣೆ ಮತ್ತು ಸೇವೆ ಅಪರೂಪ. ಈ ವರ್ಷದ […]