ಮಣಿಪಾಲ: ಕೆಎಂಸಿಯಲ್ಲಿ ವಾಕ್ ಇನ್ ಲ್ಯಾಬ್ ಪ್ರಯೋಗಾಲಯ ಮತ್ತು ಮಾದರಿ ಸಂಗ್ರಹ ಸೇವೆಗಳಿಗೆ ಚಾಲನೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಮಣಿಪಾಲದಲ್ಲಿ ಸಾರ್ವಜನಿಕರಿಗೆ ಬಹು ಉಪಯುಕ್ತವಾದ ವಾಕ್ ಇನ್ ಲ್ಯಾಬ್ ಪ್ರಯೋಗಾಲಯ ಮತ್ತು ಮಾದರಿ ಸಂಗ್ರಹ ಸೇವೆಗಳಿಗೆ ಶುಕ್ರವಾರ ಚಾಲನೆ ನೀಡಲಾಯಿತು. ಈ ನವೀನ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದ ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ. ನಾಗಭೂಷಣ್ ಉಡುಪ ಎಚ್ ಅವರು, “ಈ ಹೊಸ ಸೇವೆಯು ರೋಗಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹುವಾಗಿ ಪ್ರಯೋಜನವಾಗಲಿದೆ. ಇಂತಹ ಜನಮುಖಿ ಸೇವೆಗಳನ್ನು ನೀಡುವಲ್ಲಿ ಮಣಿಪಾಲ ಸಂಸ್ಥೆಯು ಯಾವಾಗಲು ಮುಂಚೂಣಿಯಲ್ಲಿದೆ” ಎಂದರು. ಸ್ಥಳೀಯ ನಗರಸಭೆ […]