ಮಣಿಪಾಲ: ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಮೇಲೆ ನಾಲ್ವರ ತಂಡದಿಂದ ಮಾರಣಾಂತಿಕ ಹಲ್ಲೆ

ಮಣಿಪಾಲ: ಬೈಕ್ ನಲ್ಲಿ‌ ಹೋಗುತ್ತಿದ್ದ ವ್ಯಕ್ತಿಯನ್ನು ನಾಲ್ವರ ತಂಡವೊಂದು ತಡೆದುನಿಲ್ಲಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ಮಣಿಪಾಲ 80 ಬಡಗಬೆಟ್ಟು ಗ್ರಾಮದ ನೇತಾಜಿನಗರ ಎಂಬಲ್ಲಿ ನಡೆದಿದೆ. 80 ಬಡಗಬೆಟ್ಟು ಗ್ರಾಮದ ನೇತಾಜಿ 1ನೇ ಕ್ರಾಸ್ ನಿವಾಸಿ ರಾಮ ಎಂಬವರು ಹಲ್ಲೆಗೆ ಒಳಾಗದ ವ್ಯಕ್ತಿ. ಇವರು ನ.21ರಂದು ಬೆಳಿಗ್ಗೆ ನೇತಾಜಿ ನಗರ 4ನೇ ಕ್ರಾಸ್‌ ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಆರೋಪಿಗಳಾದ ಗಣೇಶ, ರಾಕೇಶ, ರಾಜೇಂದ್ರ ಮತ್ತು ಮಣಿ ಎಂಬವರು ತಡೆದು ನಿಲ್ಲಿಸಿದ್ದಾರೆ. ಬಳಿಕ […]