ಕರ್ಕಶ ಶಬ್ದ ಉಂಟು ಮಾಡುತ್ತಿದ್ದ ಫ್ಯಾಶನ್ ಸೈಲೆನ್ಸರ್ ಗಳನ್ನು ಪುಡಿಗಟ್ಟಿದ ಮಣಿಪಾಲ ಪೊಲೀಸರು
ಮಣಿಪಾಲ: ಮಾರ್ಪಾಡುಗೊಳಿಸಿದ ಫ್ಯಾಶನ್ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದ ದ್ವಿಚಕ್ರ ವಾಹನ ಸವಾರರ ವಿರುದ್ಧ ಮಣಿಪಾಲ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದ 71 ವಿವಿಧ ಫ್ಯಾಶನ್ ಸೈಲೆನ್ಸರ್ ಗಳನ್ನು ರೋಲರ್ ಅಡಿಗೆ ಹಾಕಿ ಸೋಮವಾರ ನಾಶಗೊಳಿಸಲಾಯಿತು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು, ಮಣಿಪಾಲದ ಸಾರ್ವಜನಿಕರ ದೂರಿನ ಮೇರೆಗೆ ಮಣಿಪಾಲ ಪೊಲೀಸರು ಜ.10 ರಿಂದ ಜ.25 ರ ವರೆಗೆ […]