ಮಣಿಪಾಲದಲ್ಲಿ ಮರಗಳ ಮಾರಣಹೋಮ: ಕಾನೂನು ಕ್ರಮಕ್ಕೆ ಆಗ್ರಹ
ಮಣಿಪಾಲ: ಸುಡುಬಿಸಿಲನಿಂದ ಕೂಡಿದ ಮಣಿಪಾಲ ನಗರಕ್ಕೆ ನೆರಳಿನ ಜತೆಗೆ ತಂಗಾಳಿಯನ್ನು ನೀಡುತ್ತಿದ್ದ ಹತ್ತಕ್ಕೂ ಅಧಿಕ ಮರಗಳನ್ನು ಕಡಿದುರುಳಿಸಿರುವ ಅಮಾನವಿಯ ಕೃತ್ಯ ಮಣಿಪಾಲ- ಹುಡ್ಕೊ ಕಾಲೋನಿಯ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಯ ಬಳಿಯ ಸರಕಾರಿ ಸ್ಥಳದಲ್ಲಿ ನಡೆದಿದೆ. ವೃಕ್ಷಗಳ ಹತ್ಯೆಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಹಾಗೂ ಪರಿಸರಪ್ರೇಮಿ ಗುರುರಾಜ್ ಆಚಾರ್ಯ ಅವರು ತಿವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ, ಅರಣ್ಯ ಇಲಾಖೆ ಮರ ಕಡಿದು ಪರಿಸರಕ್ಕೆ ಹಾನಿ ಮಾಡಿರುವರ ವಿರುದ್ಧ […]