ಮಣಿಪಾಲ: ಕಾದ ಇಳೆಗೆ ತಂಪೆರೆದ ಅಕಾಲಿಕ ಮಳೆ; ಜನರು ಹೈರಾಣು
ಮಣಿಪಾಲ: ಮಣಿಪಾಲ ಪರಿಸರದಲ್ಲಿ ಇಂದು ಸಂಜೆ 7 ಗಂಟೆಯ ಸುಮಾರಿಗೆ ಅಕಾಲಿಕ ಮಳೆ ಸುರಿದಿದ್ದು, ಇಳೆಗೆ ತಂಪೆರೆದಿದೆ. 7 ಗಂಟೆಗೆ ಆರಂಭಗೊಂಡ ಮಳೆ ಸತತವಾಗಿ ಅರ್ಧ ತಾಸು ಸುರಿಯಿತು. ಇದರಿಂದ ಕೆಲಸ ಮುಗಿಸಿ ಮನೆಗೆ ಬರುವ ಜನರು ಪರದಾಡುವಂತಾಯಿತು. ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ಆಗಿ ಸುರಿದ ಮಳೆಗೆ ಜನರು ಕೆಲಕಾಲ ಹೈರಾಣಾದರು.