ಹಣ್ಣುಗಳ ‘ರಾಜ’ ಮಾವಿನ ಹಣ್ಣಿನಲ್ಲಿದೆ ಅನೇಕ ಆರೋಗ್ಯ ಪ್ರಯೋಜನಗಳು
ಹಣ್ಣುಗಳ ರಾಜನೆಂದೇ ಖ್ಯಾತಿವೆತ್ತ ಮಾವು ನೋಡಲು ಸುಂದರ, ತಿನ್ನಲು ರುಚಿಕರ. ಮಾತ್ರವಲ್ಲ, ಮಾವಿನ ಹಣ್ಣಿನ ಆರೋಗ್ಯ ಪ್ರಯೋಜನಗಳೂ ಒಂದೆರಡಲ್ಲ. ಆಮ್ರಫಲ, ಆಮ್, ಮಾವು ಎಂದು ಕರೆಯಲ್ಪಡುವ ಈ ಹಣ್ಣಿನಲ್ಲಿರುವ ಆರೋಗ್ಯ ಪ್ರಯೋಜನಗಳಿಂದಾಗಿಯೆ ಇದನ್ನು ಹಣ್ಣುಗಳ ರಾಜ ಎಂದು ಕರೆಯಲಾಗುತ್ತದೆ. ಮಾವು ಉಷ್ಣವಲಯದ ಮರವಾಗಿದ್ದು ಇದರ ವೈಜ್ಞಾನಿಕ ಹೆಸರು ಮ್ಯಾಂಗಿಫೆರಾ ಇಂಡಿಕಾ. ಇದು ಈಶಾನ್ಯ ಭಾರತ, ಬಾಂಗ್ಲಾದೇಶ ಮತ್ತು ವಾಯುವ್ಯ ಮ್ಯಾನ್ಮಾರ್ ಮೂಲದ ಸಸ್ಯವಾಗಿದೆ. ಭಾರತದಲ್ಲಿ ಬೆಳೆದ ಮಾವಿಗೆ ಪ್ರಪಂಚದಾದ್ಯಂತ ಬೇಡಿಕೆ ಇದೆ. ಮಾವಿನ ಹಣ್ಣಿನ ಆರೋಗ್ಯ ಪ್ರಯೋಜನಗಳು […]
ಬಗೆ ಬಗೆ ಮಾವು, ರುಚಿ ರುಚಿ ಮಾವು: ದೊಡ್ಡಣ್ಣಗುಡ್ಡೆ ಮಾವು ಮಾರಾಟ ಮೇಳದಲ್ಲಿ ಹಣ್ಣುಗಳ ರಾಜನ ದರ್ಬಾರ್!
ಉಡುಪಿ: ಹಣ್ಣುಗಳ ರಾಜನೆಂದೇ ಹೆಸರುವಾಸಿಯಾದ, ಕಿರಿಯರಿಂದ ಹಿಡಿದು ಹಿರಿಯರವರೆಗೂ ಬಾಯಲ್ಲಿ ನಿರೂರಿಸುವ ವಿವಿಧ ಬಗೆಯ ಮಾವಿನ ಹಣ್ಣಿನ ಮೇಳವನ್ನು ಉಡುಪಿ ದೊಡ್ಡಣಗುಡ್ಡೆ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ಆಯೋಜಿಸಲಾಗಿದೆ. ನೇರವಾಗಿ ರೈತರಿಂದಲೇ ನೈಸರ್ಗಿಕ ತಾಜಾ ಹಾಗೂ ಸ್ವಾದಿಷ್ಟ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ಒದಗಿಸುವುದು, ಸಾರ್ವಜನಿಕರಿಗೆ ವಿವಿಧ ಮಾವಿನ ತಳಿಗಳನ್ನು ಪರಿಚಯಿಸುವುದು, ಹವಾಮಾನ ವೈಪರೀತ್ಯದಿಂದಾಗಿ ಮಾವು ಇಳುವರಿ ನಷ್ಟದಲ್ಲಿರುವ ಬೆಳೆಗಾರರ ಸಂಕಷ್ಟಕ್ಕೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿ. ಪಂ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಮನಗರ ಜಿಲ್ಲಾ […]
ಮೇ.21-23: ದೊಡ್ಡಣಗುಡ್ಡೆ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಹಾಗೂ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ, ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳವು ಮೇ 21 ರಿಂದ 23 ರವರೆಗೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆಯಲಿದೆ. ಮೇಳದಲ್ಲಿ ರಾಮನಗರ ಜಿಲ್ಲೆಯ ಬಾದಾಮಿ, ರಸಪುರಿ, ಮಲಗೋವಾ, ತೋತಾಪುರಿ, ಸಿಂಧೂರ, ಸಕ್ಕರೆಗುತ್ತಿ ಹಾಗೂ […]
ಮನೆ ಬಾಗಿಲಲ್ಲೆ ಪಡೆಯಿರಿ ರುಚಿ ರುಚಿ ಮಾವು: ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸಲು ಸರ್ಕಾರದ ವೆಬ್ ಪೋರ್ಟಲ್
ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ತನ್ನ ಗ್ರಾಹಕರಿಗೆ ರುಚಿಕರವಾದ ಬಗೆ ಬಗೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಸಲುವಾಗಿ ಮಾವಿನ ಪೋರ್ಟಲ್ ಒಂದನ್ನು ತೆರೆದಿದೆ. ಮೇ16 ರಂದು ಬಿಡುಗಡೆಯಾಗಿರುವ ಈ ಪೋರ್ಟಲ್ ನಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳು ಲಭ್ಯವಿದೆ. ಈಗಾಗಲೇ ಪೋರ್ಟಲ್ ನಲ್ಲಿ ವಿವಿಧ ಪ್ರಭೇದಗಳ ಮಾವಿನ ಹಣ್ಣಿನ ಆರ್ಡರ್ ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಲಾಗಿದೆ. ಇಂಡಿಯಾ ಪೋಸ್ಟ್ ಸಹಯೋಗದಲ್ಲಿ ಈ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದ್ದು, ಇದು […]