ನಂಬರ್ ಪ್ಲೇಟ್ ನಿಯಮ ಉಲ್ಲಂಘನೆ ವಿರುದ್ದ ಕಾರ್ಯಾಚರಣೆ ಆರಂಭ..!!

ಮಂಗಳೂರು: ನಂಬರ್ ಪ್ಲೇಟ್ ಅಳವಡಿಸದ, ನಂಬರ್ ಪ್ಲೇಟ್ ನಿಯಮ ಮೀರಿದ ವಾಹನಗಳ ವಿರುದ್ದ ನಗರದಾದ್ಯಂತ ಮಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.ಕಾರ್ಯಾಚರಣೆ ವೇಳೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ಯಾನ್ಸಿ ನಮ್ಬರ್ ಪ್ಲೇಟ್, ಅಸಮರ್ಪಕ ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಮಾರು 87 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ನಿಯಮಗಳ ಪ್ರಕಾರವೇ ನೋಂದಣಿ ಫಲಕಗಳಲ್ಲಿ ನಿಗದಿತ ಅಳತೆಯ ಅಕ್ಷರಗಳು ಮತ್ತು ಅಂಕಿಗಳನ್ನು ಬರೆಸುವುದು ಕಡ್ಡಾಯವಾಗಿದೆ. ಆದರೆ, ಕೆಲವರು ನಂಬರ್‌ ಪ್ಲೇಟ್‌ಗಳಲ್ಲಿ ಮನಸೋ ಇಚ್ಛೆ ಸಂಘ-ಸಂಸ್ಥೆಗಳ ಹೆಸರು, ಲಾಂಛನ, ಚಿಹ್ನೆಗಳನ್ನು ಹಾಕಿಕೊಂಡು ನಿಯಮ […]