ಜ. 12ರಂದು ಮಂಗಳೂರಿನಲ್ಲಿ ‘ರಾಮಂ ಭಜೇ’ ಸೂರ್ಯಗಾಯತ್ರಿ ಅವರಿಂದ ಸಂಗೀತದ ಮೂಲಕ ರಾಮಾರಾಧನೆ

ಮಂಗಳೂರು: ಏಮ್ ಫಾರ್ ಸೇವಾ ಸಂಸ್ಥೆಯು ತನ್ನ ಚಾರಿಟಿ ಕಾರ್ಯಕ್ರಮಗಳಿಗೆ ಪೂರಕವಾಗಿ ಜ.12ರ ಸಂಜೆ 6.೦೦ರಿಂದ ಮಂಗಳೂರಿನ ಪುರಭವನದಲ್ಲಿ ನಗರದ ಸಂಗೀತ ಭಾರತಿ ಪ್ರತಿಷ್ಠಾನದಸಹಯೋಗದೊಂದಿಗೆ ಮ್ಯೂಸಿಕಲ್ ಸೆಲೆಬ್ರೇಷನ್ ಆಫ್ ರಾಮ ಎಂಬ ಪರಿಕಲ್ಪನೆಯೊಂದಿಗೆ `ರಾಮಂ ಭಜೇ ಎಂಬ ಸಂಗೀತ ಕಾರ್ಯಕ್ರಮವನ್ನುಆಯೋಜಿಸಿದ್ದು, ದೇಶದ ಹೆಸರಾಂತ ಯುವ ಕಲಾವಿದೆ ಸೂರ್ಯಗಾಯತ್ರಿ ಅವರ ಹಾಡುಗಾರಿಕೆ ನಡೆಯಲಿದೆ. ಏಮ್ ಫಾರ್ ಸೇವಾ ಸಂಸ್ಥೆಯು 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮೊತ್ತ ಮೊದಲ ಬಾರಿಗೆ ಮಂಗಳೂರಿನಲ್ಲಿ ಸಂಗೀತಾಸಕ್ತರಿಗೆ ಹೊಸ ರೀತಿಯಸಂಗೀತಾನುಭವ ನೀಡಬೇಕು ಎಂಬ ಉದ್ದೇಶದಿಂದ […]