ಮಂಗಳೂರಿನ ಪಿಲಿಕುಳಕ್ಕೆ ಪೆಂಗ್ವಿನ್‌, ಅನಕೊಂಡ ತರಿಸುವ ಮಹತ್ವದ ನಿರ್ಧಾರ

ಮಂಗಳೂರು: ಪ್ರಾಣಿಗಳ ವಿನಿಮಯ ಯೋಜನೆಯಡಿ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಮುಂಬಯಿಯ ಬೈಕುಲಾ ಮೃಗಾಲಯದಿಂದ ದಕ್ಷಿಣ ಅಮೆರಿಕ ಮೂಲದ “ಪೆಂಗ್ವಿನ್‌’ ಪಕ್ಷಿಯನ್ನು ತರಿಸುವ ಮಹತ್ವದ ನಿರ್ಧಾರವೊಂದು ಕೈಗೊಳ್ಳಲಾಗಿದೆ. ಇದಕ್ಕೆ ಬದಲಾಗಿ ಪಿಲಿಕುಳದಿಂದ “ಮಾರ್ಶ್‌ ಮೊಸಳೆ’ಯನ್ನು ಬೈಕುಲಾಕ್ಕೆ ನೀಡಲಾಗುತ್ತದೆ. ಸಾಮಾನ್ಯವಾಗಿ ತಂಪಾದ, ಹಿಮಚ್ಛಾದಿತ ವಾತಾವರಣವಿರುವ ದಕ್ಷಿಣಾರ್ಧ ಗೋಲದಲ್ಲಿ, ವಿಶೇಷವಾಗಿ ಅಂಟಾರ್ಟಿಕಾದಲ್ಲಿ ಪೆಂಗ್ವಿನ್‌ಗಳು ಹೆಚ್ಚಾಗಿ ಕಂಡು ಬರುತ್ತದೆ. ಇದು ನೀರು ಮತ್ತು ಭೂಮಿ ಎರಡರಲ್ಲೂ ವಾಸಿಸುತ್ತವೆ. ಪಿಲಿಕುಳದಲ್ಲಿ ಪೆಂಗ್ವಿನ್‌ಗಳಿಗೆ ಪೂರಕ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ದಾನಿಗಳು ಅಥವಾ ಸಿಎಸ್‌ಆರ್‌ […]