ಮಂಗಳೂರಿನಲ್ಲಿ 24ರಿಂದ ನಾಂದಿ ರಂಗಾಯಣ ನಾಟಕೋತ್ಸವ.
ಮೈಸೂರು ರಂಗಾಯಣದ 2023-24 ನೆ ಸಾಲಿನ ಭಾರತೀಯ ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಅಭಿನಯ ಮೂರು ನಾಟಕ ಗಳ ಪ್ರದರ್ಶನದ ನಾಂದಿ ನಾಟಕೋತ್ಸವವು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಮೇ 24 ರಿಂದ 26 ರ ತನಕ ಪ್ರತಿದಿನ ಸಂಜೆ 7.00 ಕ್ಕೆ ನಡೆಯಲಿದೆ. ಅರೆಹೊಳೆ ಪ್ರತಿಷ್ಠಾನ ಆಯೋಜಿಸಿರುವ ಈ ನಾಟಕೋತ್ಸವವು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಭಿ (ರಿ) ಮಂಗಳೂರು ಸಹಕಾರದಲ್ಲಿ ನಡೆಯಲಿದೆ. […]